Railway | ದಸರಾ ಪ್ರಯುಕ್ತ ಶಿವಮೊಗ್ಗದ ನಾಲ್ಕು ರೈಲುಗಳಿಗೆ ಹೆಚ್ಚುವರಿ ಬೋಗಿ, ಯಾವ್ಯಾವ ರೈಲಿಗೆ ಅನ್ವಯ?

Train

 

 

HIGHLIGHTS

  • ಶಿವಮೊಗ್ಗದಿಂದ ರಾಜ್ಯದ ವಿವಿಧೆಡೆ ಸಂಪರ್ಕ ಕಲ್ಪಿಸುವ ನಾಲ್ಕು ರೈಲುಗಳಿಗೆ ಹೆಚ್ಚುವರಿ ಬೋಗಿ ಸೌಲಭ್ಯ
  • ದಸರಾ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗಾಗಿ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿ ಅಳವಡಿಕೆ
  • ಪ್ರಯಾಣಿಕರು ಇದರ ಪ್ರಯೋಜನ ಪಡೆಯುವಂತೆ ನೈರುತ್ಯ ರೈಲ್ವೆ ಮನವಿ

ಸುದ್ದಿ ಕಣಜ.ಕಾಂ | KARNATAKA | 22 SEP 2022
ಶಿವಮೊಗ್ಗ: ನಾಡಹಬ್ಬ ದಸರಾ (dasara) ಆಚರಣೆಯಲ್ಲಿ ಇಡೀ ರಾಜ್ಯವೇ ಸಂಭ್ರಮದಲ್ಲಿದೆ. ಇದರ ನಡುವೆ ನೈರುತ್ಯ ರೈಲ್ವೆ (south western railway) ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲು ಮುಂದಾಗಿದೆ. ಇದು ತಾತ್ಕಾಲಿಕವಾಗಿದ್ದು, ದಸರಾ ಹಬ್ಬ(festival)ದಲ್ಲಿ ಮಾತ್ರ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.

READ | ಶಿವಮೊಗ್ಗ ಮೃಗಾಲಯದಲ್ಲಿ ಹಿರಿಯ ಹುಲಿ ಸಾವು, ಕಾರಣವೇನು?

ಯಾವ್ಯಾವ ರೈಲುಗಳಿಗೆ ಹೆಚ್ಚುವರಿ ಬೋಗಿ?

  1. ಮೈಸೂರು(Mysuru)- ತಾಳಗುಪ್ಪ(Talaguppa)- ಮೈಸೂರು ಎಕ್ಸ್ ಪ್ರೆಸ್ (express) ರೈಲು (16227/ 16228) | ಒಂದು ಸೆಕೆಂಡ್ ಕ್ಲಾಸ್ ಸ್ಲೀಪರ್ ಬೋಗಿ (second class sleeper bogie) ಹೆಚ್ಚುವರಿಯಾಗಿ ಅಳವಡಿಸಲಾಗಿದ್ದು, ಮೈಸೂರಿನಿಂದ ಹೊರಡುವ ರೈಲಿಗೆ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 5ರವರೆಗೆ ಹಾಗೂ ತಾಳಗುಪ್ಪದಿಂದ ಹೊರಡುವ ರೈಲಿಗೆ ಸೆ.27ರಿಂದ ಅ.6ರ ವರೆಗೆ ಹೆಚ್ಚುವರಿ ಬೋಗಿ ಸೌಲಭ್ಯ ಕಲ್ಪಿಸಲಾಗಿದೆ.
  2. ಮೈಸೂರು- ತಾಳಗುಪ್ಪ-ಮೈಸೂರು ಎಕ್ಸ್ ಪ್ರೆಸ್ ರೈಲು(16221/ 16222) | ಎರಡು ಸೆಕೆಂಡ್ ಕ್ಲಾಸ್ ಬೋಗಿ ನೀಡಲಾಗಿದೆ. ಮೈಸೂರಿನಿಂದ ಹೊರಡುವ ರೈಲಿಗೆ ಸೆ.26ರಿಂದ ಅಕ್ಟೋಬರ್ 5ರವರೆಗೆ, ತಾಳಗುಪ್ಪದಿಂದ ತೆರಳುವ ರೈಲಿಗೆ ಸೆ.27ರಿಂದ ಅ.6ವರೆಗೆ.
  3. ಮೈಸೂರು- ಶಿವಮೊಗ್ಗ-ಮೈಸೂರು ಎಕ್ಸ್ ಪ್ರೆಸ್ ರೈಲು (ಸಂಖ್ಯೆ 16225/ 16226) | ಎರಡು ಸೆಕೆಂಡ್ ಕ್ಲಾಸ್ ಬೋಗಿಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗುವುದು. ಮೈಸೂರಿನಿಂದ ತೆರಳುವ ಈ ರೈಲಿಗೆ ಸೆ.26ರಿಂದ ಸ.5ವರೆಗೆ ಹಾಗೂ ತಾಳಗುಪ್ಪದಿಂದ ತೆರಳುವಾಗ ಸೆ.28ರಿಂದ ಅ.7ರ ವರೆಗೆ ಹೆಚ್ಚುವರಿ ಬೋಗಿ ಸೌಲಭ್ಯ.
  4. ಶಿವಮೊಗ್ಗ- ಚಿಕ್ಕಮಗಳೂರು- ಶಿವಮೊಗ್ಗ ಪ್ಯಾಸೆಂಜರ್ ರೈಲು (07365/ 07366) | ಎರಡು ಸೆಕೆಂಡ್ ಕ್ಲಾಸ್ ಬೋಗಿಗಳ ಅಳವಡಿಕೆ ಮಾಡಲಾಗುವುದು. ಈ ರೈಲು ಶಿವಮೊಗ್ಗದಿಂದ ತೆರಳುವಾಗ ಸೆ.26ರಿಂದ ಅ.5ರವರೆಗೆ ಹಾಗೂ ತಾಳಗುಪ್ಪದಿಂದ ಹೊರಡುವಾಗ ಸೆ.28ರಿಂದ ಅ.7ವರೆಗೆ ಬೋಗಿ ಸೌಲಭ್ಯ ಇರಲಿದೆ.

https://suddikanaja.com/2022/03/05/case-has-been-registered-at-vinobanagar-station-for-allegedly-selling-car-and-fraud/

Leave a Reply

Your email address will not be published. Required fields are marked *

error: Content is protected !!