RTO | ಶಿವಮೊಗ್ಗ ಆರ್.ಟಿ.ಓ‌ ಕಚೇರಿಯಲ್ಲಿ ಸಿಬ್ಬಂದಿ ಚಳಿ ಬಿಡಿಸಿದ ಜಂಟಿ ಸಾರಿಗೆ ಆಯುಕ್ತೆ

RTO 1

 

 

HIGHLIGHTS

  • ಆರ್.ಟಿ.ಓ‌ ಕಚೇರಿಗೆ ದಿಢೀರ್ ಭೇಟಿ ನೀಡಿದ ಸಾರಿಗೆ ಜಂಟಿ ಆಯುಕ್ತೆ ಎನ್.ಜಿ. ಗಾಯಿತ್ರಿ ದೇವಿ
  • ಕಚೇರಿಯಲ್ಲಿ ಅಶಿಸ್ತು, ಅವ್ಯವಸ್ಥೆ ಕಂಡು ಗರಂ ಆದ ಗಾಯತ್ರಿ ದೇವಿ, ಎಲ್ಲವನ್ನೂ ಸರಿಪಡಿಸುವ ಭರವಸೆ

ಸುದ್ದಿ ಕಣಜ.ಕಾಂ | CITY | 30 SEP 2022
ಶಿವಮೊಗ್ಗ (shivamogga): ನಗರದ ಆರ್.ಟಿ.ಓ‌ ಕಚೇರಿ(RTO Office) ಗೆ ಶುಕ್ರವಾರ ದಿಢೀರ್ ಭೇಟಿ‌ ನೀಡಿದ ಸಾರಿಗೆ ಜಂಟಿ ಆಯುಕ್ತೆ ಎನ್.ಜಿ. ಗಾಯಿತ್ರಿ ದೇವಿ ಸಿಬ್ಬಂದಿಯ ಚಳಿ ಬಿಡಿಸಿದರು.
ಶಿವಮೊಗ್ಗ RTO ಕಚೇರಿ ವಿರುದ್ಧ ಸಾರ್ವಜನಿಕರ ದೂರಿನ ಹಿನ್ನೆಲೆ ಭೇಟಿ ನೀಡಿದ‌ ಅವರು, ಭದ್ರತಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರ ಮೇಲೆ ನಿಗಾ ಇಡಬೇಕು ಎಂದು ಎಚ್ಚರಿಕೆ ನೀಡಿದರು.
ಮೂಗು ಮುಚ್ಚಿಕೊಂಡ ಸಾರಿಗೆ ಜಂಟಿ ಆಯುಕ್ತೆ
ಶೌಚಾಲಯದ ಗಬ್ಬು ಪರಿಸರ ಕಣ್ಣಾರೆ ಕಂಡ ಜಂಟಿ ಸಾರಿಗೆ ಆಯುಕ್ತರು ಗಬ್ಬು ವಾಸನೆ ಮೂಗು ಮುಚ್ಚಿಕೊಂಡರು.
ಕಚೇರಿಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕೆಲಸ ಮಾಡುವ ಜಾಗ ಸರಿಯಾಗಿಟ್ಟುಕೊಳ್ಳುವುದು ಬರೀ ಅಧಿಕಾರಿಗಳದ್ದಷ್ಟೇ ಅಲ್ಲ‌ಸಿಬ್ಬಂದಿಯ ಜವಾಬ್ದಾರಿಯೂ ಇದೆ.
ನಂತರ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಶಿವಮೊಗ್ಗ RTO ಕಚೇರಿಯಲ್ಲಿನ ಅವ್ಯವಸ್ಥೆ ಕೂಡಲೇ ಸರಿಪಡಿಸುವ ಭರವಸೆ ನೀಡಿದರು.

https://suddikanaja.com/2022/09/06/rto-meeting-at-shivamogga-istruction-to-auto-drivers/

Leave a Reply

Your email address will not be published. Required fields are marked *

error: Content is protected !!