Railway name changed | ಅ.8ರಿಂದ ತಾಳಗುಪ್ಪ, ಟಿಪ್ಪು ಎಕ್ಸಪ್ರೆಸ್ ರೈಲುಗಳ ಹೆಸರು ಬದಲಾವಣೆ, ಹೊಸ ಹೆಸರುಗಳೇನು?

Train

 

 

HIGHLIGHTS

  • ನೈರುತ್ಯ ರೈಲ್ವೆಯಿಂದ ಎರಡು ರೈಲುಗಳ ಹೆಸರುಗಳನ್ನು‌ ಬದಲಿಸಿ ಆದೇಶ, ಅಕ್ಟೋಬರ್ 8ರಿಂದ ಅನ್ವಯ
  • ಮೈಸೂರು ಟಿಪ್ಪು ಎಕ್ಸಪ್ರೆಸ್ ಹಾಗೂ ತಾಳಗುಪ್ಪ ಎಕ್ಸಪ್ರೆಸ್ ರೈಲುಗಳ ಹೆಸರು ಮರು ನಾಮಕರಣ

ಸುದ್ದಿ ಕಣಜ.ಕಾಂ | DISTRICT | 07 OCT 2022
ಶಿವಮೊಗ್ಗ(Shivamogga): ಶಿವಮೊಗ್ಗ ಮತ್ತು ಮೈಸೂರಿನಿಂದ ಹೊರಡುವ ಪ್ರತ್ಯೇಕ ಎರಡು ರೈಲುಗಳ ಹೆಸರುಗಳನ್ನು ಬದಲಿಸಿ ನೈರುತ್ಯ ರೈಲ್ವೆ (South Western Railway) ಆದೇಶಿಸಿದೆ.

railway name
ನೈರುತ್ಯ ರೈಲ್ವೆ ಹೊರಡಿಸಿರುವ ಆದೇಶ.

READ | ಶಿವಮೊಗ್ಗದಲ್ಲಿ ಆಟೋ ರಿಕ್ಷಾಗಳಿಗೆ ಹೆಚ್ಚು ಬಾಡಿಗೆ ವಿಧಿಸುವಂತಿಲ್ಲ, RTO ರೂಲ್ಸ್ ಏ‌ನಿದೆ?

ಯಾವ್ಯಾವ ರೈಲುಗಳ ಹೆಸರು ಬದಲಾವಣೆ?

  • ರೈಲ್ವೆ ನಂ. 12613/12614 ಮೈಸೂರು-ಕೆ.ಎಸ್.ಆರ್. ಬೆಂಗಳೂರು- ಮೈಸೂರು ಟಿಪ್ಪು ಎಕ್ಸಪ್ರೆಸ್ ರೈಲನ್ನು “ಒಡೆಯರ್ ಎಕ್ಸಪ್ರೆಸ್” (Wodeyar Express) ಎಂದು ಮರು ನಾಮಕರಣ ಮಾಡಲಾಗಿದೆ.
  • ರೈಲ್ವೆ ನಂ. 16221/16222 ತಾಳಗುಪ್ಪ- ಮೈಸೂರು- ತಾಳಗುಪ್ಪ ಎಕ್ಸಪ್ರೆಸ್ ರೈಲನ್ನು “ಕುವೆಂಪು ಎಕ್ಸಪ್ರೆಸ್” (Kuvempu Express) ಎಂದು ಮರು ನಾಮಕರಣ ಮಾಡಲಾಗಿದೆ.

ಅಕ್ಟೋಬರ್ 8ರಿಂದ ಅನ್ವಯವಾಗುವಂತೆ ಈ‌ ಎರಡು ರೈಲುಗಳ ಹೆಸರುಗಳನ್ನು ಮರುನಾಮಕರಣ ಮಾಡಲಾಗಿದೆ.

https://suddikanaja.com/2022/10/07/route-change-in-shimoga/

Leave a Reply

Your email address will not be published. Required fields are marked *

error: Content is protected !!