Sports news | ಶಿವಮೊಗ್ಗ ಪ್ರತಿಭೆ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್’ಗೆ ಆಯ್ಕೆ

sports

 

 

HIGHLIGHTS

  • ಜಿಲ್ಲೆಯ ಪ್ರತಿಭೆ ಆಕಾಶ್ ಎಸ್. ಗೊಲ್ಲರ್ ಓಪನ್ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್’ಗೆ ಸೆಲೆಕ್ಟ್
  • ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ ಕ್ರೀಡಾಕೂಟ
  • ತರಬೇತುದಾರ ಬಾಳಪ್ಪ ಮಾನೆ ಬಳಿ ತರಬೇತಿ ಪಡೆಯುತ್ತಿದ್ದ ಆಕಾಶ್

ಸುದ್ದಿ ಕಣಜ.ಕಾಂ | DISTRICT | 08 OCT 2022
ಶಿವಮೊಗ್ಗ(Shivamogga): ಅಕ್ಟೋಬರ್ 16 ರಿಂದ 18ರ ವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣ(Kanthirava stadium)ದಲ್ಲಿ ಏರ್ಪಡಿಸಿರುವ 61ನೇ ಓಪನ್ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ (Open National Athletic Championship) ಸ್ಪರ್ಧೆಯ 800 ಮೀಟರ್ ಓಟದಲ್ಲಿ ಭಾಗವಹಿಸಲು ಜಿಲ್ಲೆಯ ಆಕಾಶ್ ಎಸ್. ಗೊಲ್ಲರ್ ಅವರು ಆಯ್ಕೆಯಾಗಿದ್ದಾರೆ.
ಆಕಾಶ್ ಎಸ್.ಗೊಲ್ಲರ್ ಅಥ್ಲೆಟಿಕ್ಸ್ ತರಬೇತುದಾರ (Athletic coach) ಬಾಳಪ್ಪ ಮಾನೆ ( Balappa mane) ಇವರ ಬಳಿ ದೈನಂದಿನ ತರಬೇತಿ ಪಡೆಯುತ್ತಿದ್ದಾರೆ. ಈ ಕ್ರೀಡಾಪಟುಗೆ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ, ಶಿವಮೊಗ್ಗ ಹಾಗೂ ಯುವ ಸಬಲೀಕರಣ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

https://suddikanaja.com/2022/10/07/south-western-railway-renaming-of-two-trains/

Leave a Reply

Your email address will not be published. Required fields are marked *

error: Content is protected !!