FSL center | ಶಿವಮೊಗ್ಗದಲ್ಲಿ ಶೀಘ್ರವೇ ಎಫ್.ಎಸ್.ಎಲ್ ಕೇಂದ್ರ ಸ್ಥಾಪನೆ

forensic lab

 

 

HIGHLIGHTS

  • ತೀರ್ಥಹಳ್ಳಿಯಲ್ಲಿ ಪೊಲೀಸ್ ವಸತಿ ಗೃಹಗಳಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಂದ ಶಂಕುಸ್ಥಾಪನೆ
  • ಶಿವಮೊಗ್ಗದಲ್ಲಿ ಶೀಘ್ರವೇ forensic science laboratory ಕೇಂದ್ರ ಸ್ಥಾಪನೆ
  • ಸೈಬರ್ ಕ್ರೈಂ ವಿಭಾಗ ಬಲಪಡಿಸಲಾಗುತ್ತಿದೆ. ಅಗತ್ಯ ಉಪಕರಣಗಳನ್ನು ಪೂರೈಸಲಾಗಿದೆ: ಆರಗ

ಸುದ್ದಿ ಕಣಜ.ಕಾಂ | DISTRICT | 10 OCT 2022
ಶಿವಮೊಗ್ಗ: ಜಿಲ್ಲೆಯಲ್ಲಿ ಶೀಘ್ರವೇ ಎಫ್.ಎಸ್.ಎಲ್ (forensic science laboratory-FSL) ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (araga Jnanendra) ಹೇಳಿದರು.
ತೀರ್ಥಹಳ್ಳಿ(thirthahalli)ಯಲ್ಲಿ ಪೊಲೀಸ್ ವಸತಿ ಗೃಹಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಎಫ್.ಎಸ್.ಎಲ್‌ ವಿಶ್ವವಿದ್ಯಾಲಯ(university)ವನ್ನು ಸ್ಥಾಪಿಸಲಾಗುವುದು. ಈ‌ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

READ | ಶಿವಮೊಗ್ಗದಲ್ಲಿ 12 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಲಭ್ಯ,‌ ಯಾರೆಲ್ಲ, ಎಲ್ಲೆಲ್ಲಿ‌ ಪಡೆಯ‌ಬಹುದು?

ವಿವಿಧ ಜಿಲ್ಲೆಗಳಲ್ಲಿ FSL ಕೇಂದ್ರಗಳ ಸ್ಥಾಪನೆ
ಬಳ್ಳಾರಿ, ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಎಫ್.ಎಸ್.ಎಲ್ ಕೇಂದ್ರಗಳನ್ನು ಆರಂಭಿಸಲಾಗಿದೆ. ಬರುವ ದಿನಗಳಲ್ಲಿ ಶಿವಮೊಗ್ಗದಲ್ಲೂ ಸ್ಥಾಪಿಸಲಾಗುವುದು ಎಂದು ಹೇಳಿದರು.
₹20 ಕೋಟಿ ವೆಚ್ಚದಲ್ಲಿ ಶಂಕುಸ್ಥಾಪನೆ
ಶಿಕಾರಿಪುರ, ಶಿರಾಳಕೊಪ್ಪದಲ್ಲಿ ₹20 ಕೋಟಿ ವೆಚ್ಚದಲ್ಲಿ ಪೊಲೀಸ್ ವಸತಿ ನಿಲಯಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ. ಪೊಲೀಸರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಅವರು ಕಾರ್ಯನಿರ್ವಹಿಸುವ ಜಾಗ ಸ್ವಚ್ಛವಾಗಿರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಆದ್ಯತೆ ನೀಡಲಾಗುತ್ತಿದೆ. ಪೊಲೀಸರಿಗೆ ಅಗತ್ಯ ಶಸ್ತ್ರಾಸ್ತ್ರ ಒದಗಿಸಲಾಗಿದೆ. ಸೈಬರ್ ಕ್ರೈಂ ವಿಭಾಗ ಬಲಪಡಿಸಲಾಗುತ್ತಿದೆ ಎಂದು ತಿಳಿಸಿದರು.

https://suddikanaja.com/2022/10/10/interested-persons-are-invited-to-work-as-volunteers-in-shivamogga-zoo/

 

Leave a Reply

Your email address will not be published. Required fields are marked *

error: Content is protected !!