Keladi shivappa nayak university | ಕೊಳೆ, ಎಲೆಚುಕ್ಕೆ ರೋಗದ ಅಧ್ಯಯನಕ್ಕೆ ವಿಜ್ಞಾನಿಗಳ ತಂಡ ರಚನೆ

Agriculture university

 

 

ಸುದ್ದಿ ಕಣಜ.ಕಾಂ | DISTRICT | 14 OCT 2022
ಶಿವಮೊಗ್ಗ: ಮಳೆ ಮತ್ತು ತೇವಾಂಶದಿಂದಾಗಿ ಅಡಿಕೆಯಲ್ಲಿ ಕೊಳೆ ಹಾಗೂ ಎಲೆಚುಕ್ಕೆ ರೋಗ ಹೆಚ್ಚಳವಾಗಿದೆ. ಈ ಬಗ್ಗೆ ಅಧ್ಯಯನ ನಡೆಸಲು ವಿಶ್ವವಿದ್ಯಾಲಯದಿಂದ ವಿಜ್ಞಾನಿಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ತಿಳಿಸಿದರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶುಕ್ರವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಾರ್ಷಿಕ 14 ಸಾವಿರ ಅಡಿಕೆ ಸಸಿ ವಿತರಣೆ
ಅಡಿಕೆ ಸಂಶೋಧನೆ ಕೇಂದ್ರದಿಂದ ಬೀಜ ಅಭಿವೃದ್ಧಿ ಮಾಡಲಾಗುತ್ತಿದೆ. ವಾರ್ಷಿಕ 14 ಲಕ್ಷ ವಿವಿಧ ಜಾತಿಯ ಸಸಿಗಳನ್ನು ಬೆಳೆಸಿ ರೈತರಿಗೆ ನೀಡಲಾಗುತ್ತಿತ್ತು. ಈ ಸಲ 18 ಸಾವಿರ ಸಸಿಗಳನ್ನು ರೈತರಿಗೆ ನೀಡಲು ಯೋಜನೆ ರೂಪಿಸಲಾಗಿದೆ ಎಂದರು.

Arecanut FB group join

READ | 13/10/2022ರ ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಇದೆ?

ವಿಸಿ ಡಾ.ಆರ್.ಸಿ.ಜಗದೀಶ್ ಹೇಳಿದ್ದೇನು?

  • ಈ ಮುಂಚೆ ಇಂತಹ ಬೆಳೆಗಳನ್ನು ಇಂತಹುದ್ದೇ ಪ್ರದೇಶಗಳಲ್ಲಿ ಬೆಳೆಯಬೇಕು ಎಂದು ಹೇಳಲಾಗುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಬಯಲು ಸೀಮೆಯಲ್ಲೂ ಅಡಿಕೆಯನ್ನು ಬೆಳೆಸಲಾಗುತ್ತಿದೆ. ಇದು ಸಾಧ್ಯವಾಗಿದ್ದು ಹೊಸ ತಳಿಗಳಿಂದಾಗಿ.
  • ಶಿವಮೊಗ್ಗ ಜಿಲ್ಲೆಯಲ್ಲಿ ಗೋಡಂಬಿ ಬೆಳೆ ಬೆಳೆಯುವುದಕ್ಕೆ ಪೂರಕ ವಾತಾವರಣ ಇದೆ ಎಂಬ ಕಾರಣಕ್ಕೆ ವಿವಿಯಿಂದ ಗೇರು ಬೆಳೆಗೆ ಪ್ರೋತ್ಸಾಹ ನೀಡಲಾಗಿತ್ತು. ಈ ಬಾರಿಯೂ ವಿವಿಧ ತಳಿಯ 1 ಲಕ್ಷ ಗೇರು ಗಿಡಗಳನ್ನು
    ಬೆಳೆಸಿ ರೈತರಿಗೆ ವಿತರಿಸಲು ಯೋಜಿಸಲಾಗಿದೆ. ಇದರ ಜತೆಗೆ ಕೋಕೊ, ಹಲಸು, ಮೆಣಸು, ಏಲಕ್ಕಿ ಮೊದಲಾದ ಗಿಡಗಳನ್ನು ಬೆಳೆದು ಪೂರೈಸಲಾಗುತ್ತದೆ.
  • ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ವಿಫುಲ ಅವಕಾಶವಿದ್ದು, ಇದಕ್ಕೆ ಪೂರಕವಾದ ಕೋರ್ಸ್ ಆರಂಭಿಸಲಾಗುತ್ತಿದೆ. ಅರಣ್ಯಕ್ಕೆ ಸಂಬಂಧಿಸಿದ ಕೋರ್ಸ್ ಈಗಾಗಲೇ ನಡೆಯುತ್ತಿದೆ.
  • ಜೇನು ಸಾಕಾಣಿಕೆ ಮಾಡಲಾಗುತ್ತಿದ್ದು, 1,500 ಕೆ.ಜಿ ಜೇನುತುಪ್ಪ ಉತ್ಪಾದಿಸಲಾಗಿದೆ. ಇದಕ್ಕೆ ಬೇಡಿಕೆ ಇರುವುದರಿಂದ ಉತ್ಪನ್ನ ಇನ್ನಷ್ಟು
    ಹೆಚ್ಚಿಸಲಾಗುತ್ತದೆ.

ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ ಯಡಗೆರೆ  ದ್ದರು.

https://suddikanaja.com/2021/10/14/areca-palms-suffers-from-fungal-disease-no-need-to-worry-scientist-said/

Leave a Reply

Your email address will not be published. Required fields are marked *

error: Content is protected !!