Job Junction | ಐಟಿಐ ತೇಗರ್ಡೆಯಾದವರಿಗೆ ಉದ್ಯೋಗ ಅವಕಾಶ, ಶಿವಮೊಗ್ಗದಲ್ಲಿ ಇಂಟರ್ ವ್ಯೂ

IMG 20220517 232257 102

 

 

ಸುದ್ದಿ ಕಣಜ.ಕಾಂ | DISTRICT | 17 OCT 2022
ಶಿವಮೊಗ್ಗ: ಐಟಿಐ ತೇರ್ಗಡೆಯಾದವರಿಗೋಸ್ಕರ ಬೈಪಾಸ್ ರಸ್ತೆಯಲ್ಲಿರುವ ಶ್ರೀ ಜಗದ್ಗುರು ಪಂಚಾಚಾರ್ಯ ಐಟಿಐ ಕಾಲೇಜಿನ ಆವರಣದಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದೆ.

  • ಸಂದರ್ಶನ ದಿನಾಂಕ | ಅಕ್ಟೋಬರ್ 21
  • ಸಮಯ | ಬೆಳಗ್ಗೆ 9 ಗಂಟೆಯಿಂದ
  • ಸ್ಥಳ | ಶ್ರೀ ಜಗದ್ಗುರು ಪಂಚಾಚಾರ್ಯ ಐಟಿಐ ಕಾಲೇಜು
  • ಭಾಗವಹಿಸಲಿರುವ ಸಂಸ್ಥೆ | ಬೆಂಗಳೂರಿನ ಟಾಟಾ ಪವರ್‌ ಸೋಲಾರ್‌ ಲಿಮಿಟೆಡ್‌
  • ಮಾಸಿಕ ಶಿಷ್ಯವೇತನ | ₹13,023, ಕ್ಯಾಂಟೀನ್‌ ಹಾಗೂ ವೈದ್ಯಕೀಯ ಸೌಲಭ್ಯ

ಯಾರೆಲ್ಲ ಭಾಗವಹಿಸಬಹುದು?
ಅ.21ರ ಬೆಳಗ್ಗೆ 9 ಗಂಟೆಗೆ 1 ವರ್ಷದ ಅವಧಿಯ ಅಪ್ರೆಂಟಿಶಿಪ್‌ (ಎಟಿಎಸ್‌) ತರಬೇತಿಗೆ ಕ್ಯಾಂಪಸ್‌ ಸಂದರ್ಶನ ನಡೆಯಲಿದೆ. ಪ್ರವೇಶ ಉಚಿತವಾಗಿದೆ.
2020ರಿಂದ 22ರ ವರೆಗೆ ಐಟಿಐನಲ್ಲಿ ತೇರ್ಗಡೆಗೊಂಡಿರುವ 22 ವಯೋಮಿತಿ ಒಳಗಿನ ಅಭ್ಯರ್ಥಿಗಳು ಭಾಗವಹಿಸಬಹುದು. ಎಲೆಕ್ಟ್ರಾನಿಕ್ಸ್‌ ಮೆಕ್ಯಾನಿಕ್‌, ಎಲೆಕ್ಟ್ರಿಷಿಯನ್‌ ಮತ್ತು ಫಿಟ್ಟರ್‌ ವೃತ್ತಿಗಳ ಪುರುಷ ಅಭ್ಯರ್ಥಿಗಳಿಗೆ ಅವಕಾಶವಿದೆ.
ಸಂದರ್ಶನಕ್ಕೆ ಈ ದಾಖಲೆಗಳು ಅಗತ್ಯ
ಬಯೋಡೆಟಾ, 8 ಪಾಸ್‌ ಪೋರ್ಟ್‌, ಎಸ್‌‌‌.ಎಸ್‌.ಎಲ್‌.ಸಿ ಮತ್ತು ಐಟಿಐನ ಮೂಲ ಜೆರಾಕ್ಸ್‌ ಅಂಕ ಪಟ್ಟಿಗಳ ಪ್ರತಿ, ವೈದ್ಯಕೀಯ ಪ್ರಮಾಣ ಪತ್ರ ಈ ಎಲ್ಲ ದಾಖಲೆಗಳನ್ನು ಸಂದರ್ಶನ ವೇಳೆ ತರತಕ್ಕದ್ದು.
ಇವರನ್ನು ಸಂಪರ್ಕಿಸಿ
ಹೆಚ್ಚಿನ ಮಾಹಿತಿಗಾಗಿ ಎಸ್‌ಜೆಪಿ ಐಟಿಐ ಪ್ರಾಚಾರ್ಯ ಡಿ.ಎನ್‌.ಪರಮೇಶ್ವರಪ್ಪ ( 99018 37705) ಅವರನ್ನು ಸಂಪರ್ಕಿಸಬಹುದು.

https://suddikanaja.com/2022/10/16/video-of-an-altercation-between-kargal-psi-and-kpcl-security-personnel-of-sagar-taluk-has-gone-viral/

Leave a Reply

Your email address will not be published. Required fields are marked *

error: Content is protected !!