Sagar | ಸಾಗರದಲ್ಲಿ ಅ.28ರಂದು ಎಲ್ಲ ಬಗೆಯ ಸಂತೆ,‌ ಜಾತ್ರೆಗಳು ನಿಷೇಧ

SAGAR Taluk

 

 

ಸುದ್ದಿ ಕಣಜ.ಕಾಂ | TALUK | 20 OCT 2022
ಶಿವಮೊಗ್ಗ(Shivamogga): ಗ್ರಾಮ ಪಂಚಾಯಿತಿ ವಿವಿಧ ಕಾರಣಗಳಿಂದ ಖಾಲಿ ಇರುವ ಮತ್ತು ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸುವ ಸಂಬಂಧ ವೇಳಾಪಟ್ಟಿ ಪ್ರಕಟವಾಗಿದ್ದು, ಸಾಗರ ತಾಲ್ಲೂಕಿನ ಅರಲಗೋಡು ಗ್ರಾಮ ಪಂಚಾಯಿತಿ ಕುರುಮನೆ ಕ್ಷೇತ್ರದಲ್ಲಿ ಅಕ್ಟೋಬರ್ 28 ರಂದು ಉಪ ಚುನಾವಣೆ ನಡೆಯಲಿದೆ.
ಚುನಾವಣಾ ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಂದು ಬೆಳಗ್ಗೆ 5 ಗಂಟೆಯಿಂದ ಸಂಜೆ 7 ಗಂಟೆವರೆಗೆ ಸಂತೆ ಮತ್ತು ಎಲ್ಲ ತರಹದ ಜಾತ್ರೆಗಳನ್ನು ನಡೆಸದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶಿಸಿದ್ದಾರೆ.

https://suddikanaja.com/2022/10/19/special-train-from-shivamogga-and-states-other-places-in-deepawali-festival-season/

Leave a Reply

Your email address will not be published. Required fields are marked *

error: Content is protected !!