Hindu harsha | ಮೋದಿ, ಯೋಗಿ ನನ್ನ ಪಾಲಿನ ದೇವರು, ಭಾವೋದ್ವೇಗದಿಂದ ಮಾತನಾಡಿದ ಹಿಂದೂ ಹರ್ಷನ ಅಕ್ಕ ಅಶ್ವಿನಿ, ಸರ್ಕಾರದ ವಿರುದ್ಧ ಆರೋಪಗಳಿವು

ashwini harsha sister

 

 

ಸುದ್ದಿ ಕಣಜ.ಕಾಂ | SHIMOGA CITY | 25 OCT 2022
ಶಿವಮೊಗ್ಗ(shivamogga): “ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ನನ್ನ ಪಾಲಿಗೆ ದೇವರಿದ್ದಂತೆ. ಪ್ರಕರಣವನ್ನು ಎನ್‌ಐಎ (National Investigation Agency) ತನಿಖೆಗೆ ವಹಿಸಿ ದೊಡ್ಡ ಸಹಾಯ ಮಾಡಿದ್ದಾರೆ” ಎಂದು ಬಜರಂಗ ದಳ ಕಾರ್ಯಕರ್ತ ಹಿಂದೂ ಹರ್ಷ (Hindu Harsha)ನ ಸಹೋದರಿ ಅಶ್ವಿನಿ ಹೇಳಿದ್ದಾರೆ.

ನಾಳೆ ದಿನ ನನಗೆ ಬಂದು ಚಾಕು ಚುಚ್ಚಿ ಹೋಗುತ್ತಾರೆ. ಬಳಿಕ ಎಲ್ಲರೂ ನನ್ನ ತಾಯಿಗೆ ಸಾಂತ್ವನ ಹೇಳುತ್ತಾರೆ. ಇದರಿಂದ ಏನು ಪ್ರಯೋಜನ? ಸೀಗೆಹಟ್ಟಿಯಲ್ಲಿ ಹೆಚ್ಚು ಬಂದೋಬಸ್ತ್ ಕಲ್ಪಿಸಿ.
| ಅಶ್ವಿನಿ, ಹಿಂದೂ ಹರ್ಷ ಸಹೋದರಿ

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೀಗೆಹಟ್ಟಿಯಲ್ಲಿ ಲಾಂಗು ಮಚ್ಚು ಹಿಡಿದುಕೊಂಡು ಕೆಲವರು ದಾಂಧಲೆ ಮಾಡಿದ್ದು, ಬೆದರಿಕೆ ಹಾಕಿದ್ದಾರೆ. ಹಾಗಾದರೆ, ನಾವು ಜೈ ಶ್ರೀರಾಮ್ ಅನ್ನುವುದು ಬೇಡವೇ? ಎಂದು ಪ್ರಶ್ನಿಸಿದರು.

READ | ಭರ್ಮಪ್ಪ ನಗರದಲ್ಲಿ ಯುವಕನ ಮೇಲೆ ಅಟ್ಯಾಕ್ ಮಾಡಿದ ಮೂವರ ಬಂಧನ, ಮೂವರದ್ದೂ ಕ್ರಿಮಿನಲ್ ಬ್ಯಾಗ್ರೌಂಡ್

ಇನ್ನೆಷ್ಟು ಬಲಿ ಬೇಕು? ನಮಗೆ ಭದ್ರತೆ ಕಲ್ಪಿಸಿ
ಹರ್ಷನ ಹತ್ಯೆಯಾಗಿದೆ. ಇನ್ನೆಷ್ಟು ಹಿಂದೂ ಕಾರ್ಯಕರ್ತರ ಬಲಿಯಾಗಬೇಕು? ರಾಜಾರೋಷವಾಗಿ ಬೆದರಿಕೆ ಹಾಕಲಾಗುತ್ತಿದೆ. ಒಂದುವೇಳೆ, ಹರ್ಷನ ಕೊಲೆ ಆರೋಪಿಗಳ ಎನ್ ಕೌಂಟರ್ ಮಾಡಿದ್ದಿದ್ದರೆ‌ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು. ನಮ್ಮ ಕುಟುಂಬಕ್ಕೆ ಭದ್ರತೆ ಕಲ್ಪಿಸಿ ಎಂದು ಕೋರಿದರು.

https://suddikanaja.com/2022/10/25/deepawali-festival-special-train-from-shivamogga-to-yashwanathpur-south-western-railway-requsted-to-use-fecility/

Leave a Reply

Your email address will not be published. Required fields are marked *

error: Content is protected !!