Election | ಇಂದು ನಡೆಯಲಿದೆ ಶಿವಮೊಗ್ಗ ಮೇಯರ್, ಉಪ ಮೇಯರ್ ಎಲೆಕ್ಷನ್, ಏನೆಲ್ಲ ನಡೆಯಲಿದೆ?

Palike

 

 

ಸುದ್ದಿ ಕಣಜ.ಕಾಂ | SHIMOGA CITY | 28 OCT 2022
ಶಿವಮೊಗ್ಗ(Shivamogga): ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್ (Mayor) ಮತ್ತು ಉಪ ಮೇಯರ್ (deputy mayor) ಸ್ಥಾನಗಳಿಗೆ ಅಕ್ಟೋಬರ್ 28ರಂದು ಮಧ್ಯಾಹ್ನ 3 ಗಂಟೆಗೆ ಚುನಾವಣೆ ನಡೆಯಲಿದೆ.
ಪಾಲಿಕೆ ಸಭಾಂಗಣದಲ್ಲಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲನ್ ಬಿಸ್ವಾಸ್ ಅಧ್ಯಕ್ಷತೆಯಲ್ಲಿ ಪಾಲಿಕೆ ಚುನಾವಣಾ ಸಭೆಯನ್ನು ಕರೆಯಲಾಗಿದೆ.

READ | ಬಲಿಪಾಢ್ಯಮಿ ದಿನವೇ ಪೊಲೀಸ್ ಗುಂಡಿನ ಸದ್ದು, ಮಹಜರು ವೇಳೆ ಪೊಲೀಸರ ಮೇಲೆಯೇ ಮಾರಕಾಸ್ತ್ರದಿಂದ ಅಟ್ಯಾಕ್ 

ಅಂದು ಬೆಳಗ್ಗೆ 12 ರಿಂದ ಮಧ್ಯಾಹ್ನ 1ರ ವರೆಗೆ ನಾಮಪತ್ರಗಳನ್ನು ಸ್ವೀಕರಿಸುವುದು. ಮಧ್ಯಾಹ್ನ 3ರ ನಂತರ ನಾಮಪತ್ರ ಪರಿಶೀಲನೆ, ಕ್ರಮಬದ್ಧ ನಾಮಪತ್ರಗಳ ಘೋಷಣೆ, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವುದು, ಉಮೇದುವಾರರ ಪಟ್ಟಿ ಘೋಷಣೆ, ಅವಿರೋಧ ಆಯ್ಕೆಯಾದಲ್ಲಿ ಫಲಿತಾಂಶ ಘೋಷಣೆ, ಚುನಾವಣೆ ಅಗತ್ಯವಿದ್ದಲ್ಲಿ ಕೈ ಎತ್ತುವ ಮೂಲಕ ಮತದಾನ ಹಾಗೂ ಸದಸ್ಯರ ಸಹಿ ದಾಖಲಿಸುವುದು ಮತ್ತು ಮತಗಳ ಎಣಿಕೆ ಹಾಗೂ ಫಲಿತಾಂಶ ಘೋಷಿಸಲಾಗುವುದು. ಈ ಎಲ್ಲ ಪ್ರಕ್ರಿಯೆ ಗಳು ನಡೆಯಲಿವೆ.
ಮೇಯರ್ ಸ್ಥಾನಕ್ಕೆ ಪರಿಶಿಷ್ಟ ಜಾತಿ ಹಾಗೂ ಉಪ ಮೇಯರ್ ಸ್ಥಾನಕ್ಕೆ ಹಿಂದುಳಿದ ‘ಎ’ ವರ್ಗದ ಮಹಿಳೆಗೆ ಮೀಸಲಾತಿ ನೀಡಲಾಗಿದೆ. ಈಗಾಗಲೇ ಪಾಲಿಕೆಯಲ್ಲಿ ಚುನಾವಣೆ ರಂಗೇರಿದೆ.

https://suddikanaja.com/2022/10/25/shimoga-smart-city-helpline-launched-for-public-grievance/

Leave a Reply

Your email address will not be published. Required fields are marked *

error: Content is protected !!