Seegehatti | ಸೀಗೆಹಟ್ಟಿ ಕೇಸ್ ಬಗ್ಗೆ ಎಸ್.ಪಿ ಮಿಥುನ್ ಕುಮಾರ್ ಹೇಳಿದ್ದೇನು? ‘ಶಿವಮೊಗ್ಗ ಪೊಲೀಸರ ಮೇಲೆ ಪ್ರೆಶರ್ ಇಲ್ಲ’

SP Mithun Kumar 1

 

 

ಸುದ್ದಿ ಕಣಜ.ಕಾಂ | DISTRICT | 28 OCT 2022
ಶಿವಮೊಗ್ಗ(Shivamogga): ಸೀಗೆಹಟ್ಟಿಯಲ್ಲಿ ಇತ್ತೀಚೆಗೆ ದುಷ್ಕರ್ಮಿಗಳು ಬೆದರಿಕೆ ಹಾಕಿರುವ ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ (GK Mithun Kumar) ಅವರು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.

READ | ಇಂದು ನಡೆಯಲಿದೆ ಶಿವಮೊಗ್ಗ ಮೇಯರ್, ಉಪ ಮೇಯರ್ ಎಲೆಕ್ಷನ್, ಏನೆಲ್ಲ ನಡೆಯಲಿದೆ?

ಭರ್ಮಪ್ಪ ಕಾಲೋನಿಯಲ್ಲಿ ವ್ಯಕ್ತಿಯೊಬ್ಬನಿಗೆ ಕಲ್ಲಿನಿಂದ ಹಲ್ಲೆ ಮಾಡಲಾಗಿದ್ದು, ಅದಕ್ಕೂ ಮುಂಚೆ‌ ಸೀಗೆಹಟ್ಟಿಯಲ್ಲಿ ಹರ್ಷನ ಕುಟುಂಬದವರಿಗೆ ಧಮ್ಕಿ ಹಾಕಿದ್ದಾರೆ ಎಂಬ ವಿಚಾರ ವೈರಲ್ ಆಗಿದ್ದು, ಖುದ್ದು ಹರ್ಷನ ಸಹೋದರಿ ಅಶ್ವಿನಿಯೇ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದರು. ಆದರೆ, ಎಸ್.ಪಿ ಅವರು ಹೇಳುವ ಪ್ರಕಾರ, ಬೆದರಿಕೆ ಹಾಕಿರುವುದಾಗಿ ಅಶ್ವಿನಿ ಅಥವಾ ಅವರ ಕುಟುಂಬದಿಂದ ದೂರು ನೀಡಿಲ್ಲ. ಜತೆಗೆ, ತನಿಖೆ ವೇಳೆಯೂ ಹರ್ಷನ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ ಅಂಶಕ್ಕೆ ಪೂರಕವಾದ ಸಾಕ್ಷಿಗಳು‌ ಲಭಿಸಿಲ್ಲ ಎಂದು ಹೇಳಿದರು.
ಪೊಲೀಸ್ ಇಲಾಖೆ ಅಶ್ವಿನಿ ಅವರ ಕುಟುಂಬಕ್ಕಷ್ಟೇ ಅಲ್ಲ; ಇಡೀ ಶಿವಮೊಗ್ಗಕ್ಕೆ ರಕ್ಷಣೆ ನೀಡಲು ಸಿದ್ಧವಿದೆ‌. ಪ್ರಕರಣಗಳ ತನಿಂಎಗೆ ಯಾವುದೇ ರೀತಿಯ ಒತ್ತಡಗಳಿಲ್ಲ ಎಂದು ಸ್ಪಷ್ಟಪಡಿಸಿದರು.

https://suddikanaja.com/2022/10/27/shimoga-police-interduced-mcctns-mobile-crime-and-criminal-tracking-network-system-to-identify-criminals/

Leave a Reply

Your email address will not be published. Required fields are marked *

error: Content is protected !!