ಕೋವಿಡ್ ರಿಪೋರ್ಟ್: ಮತ್ತೆ ಶತಕ ದಾಟಿದ ಸಕ್ರಿಯ ಪ್ರಕರಣ, ಯಾವ ತಾಲೂಕಲ್ಲಿ ಎಷ್ಟು ಪ್ರಕರಣ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬುಧವಾರವಷ್ಟೇ 90ಕ್ಕೆ ಇಳಿದ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಗುರುವಾರ 102ಕ್ಕೆ ಏರಿಕೆಯಾಗಿದೆ.
ಮೆಗ್ಗಾನ್ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್‍ನಲ್ಲಿ 32 ಜನರು ಚಿಕಿತ್ಸೆ ಪಡೆಯುತ್ತಿದ್ದರೆ, ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು ದಾಖಲಾಗಿದ್ದಾರೆ. ಮನೆಯ ಆರೈಕೆಯಲ್ಲಿ 68 ಜನರಿದ್ದಾರೆ.

ಇಂದು ಹೊಸದಾಗಿ 22 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 10 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಕಾಯಿಲೆಯಿಂದ ಯಾವುದೇ ಸಾವು ಸಂಭವಿಸಿಲ್ಲ. ಇಲ್ಲಿಯವರೆಗೆ 348 ಜನರನ್ನು ಕೊರೊನಾ ಬಲಿ ಪಡೆದಿದೆ.
ಗಂಟಲು ದ್ರವ ಮಾದರಿ ಪರೀಕ್ಷೆ ಕಾರ್ಯ ಮುಂದುವರಿದಿದ್ದು, 2125 ಜನರ ಮಾದರಿ ಸಂಗ್ರಹಿಸಲಾಗಿದೆ. 1631 ವರದಿ ನೆಗೆಟಿವ್ ಬಂದಿವೆ.
ತಾಲೂಕುವಾರು ವರದಿ: ಶಿವಮೊಗ್ಗ 12, ಭದ್ರಾವತಿ 6, ಶಿಕಾರಿಪುರ 1, ತೀರ್ಥಹಳ್ಳಿ 0, ಸೊರಬ 3, ಸಾಗರ 0, ಹೊಸನಗರ 0.

error: Content is protected !!