ಹೊಸ ವರ್ಷಕ್ಕೆ ಪಬ್, ಕ್ಲಬ್‍ಗಿಲ್ಲ ನಿರ್ಬಂಧ, ಡಿಜೆ, ಡ್ಯಾನ್ಸ್ ಗೆ ಪ್ರತಿಬಂಧ, ಏನಿರುತ್ತೆ ಏನಿರಲ್ಲ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ 2020ರ ಬಹುಭಾಗವನ್ನು ನುಂಗಿದೆ. ಈಗ ಹೊಸ ವರ್ಷದ ಆಚರಣೆಯ ಮೇಲೆಯೂ ಕರಿಛಾಯೆ ಮೂಡುವಂತೆ ಮಾಡಿದೆ. ಸರ್ಕಾರ ಹೊಸ ವರ್ಷ ಆಚರಣೆಯ ಸಂಬಂಧ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಕಟ್ಟುನಿಟ್ಟಿನಿಂದ ಪಾಲಿಸುವಂತೆ ಸೂಚನೆ ನೀಡಿದೆ.

  • ಡಿಸೆಂಬರ್ 30ರಿಂದ 2021ರ ಜನವರಿ 1ರವರೆಗೆ ವಿಶೇಷ ಡಿಜೆ, ಡ್ಯಾನ್ಸ್, ಪಾರ್ಟಿ ಇತ್ಯಾದಿಗಳ ಮೇಲೆ ನಿಷೇಧವಿದೆ. ಆದರೆ, ಕ್ಲಬ್, ಪಬ್, ರೆಸ್ಟೋರೆಂಟ್ ಪ್ರತಿದಿನದಂತೆ ತೆರೆದಿರಲಿವೆ.
  • ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಜನ ಸೇರುವುದು, ಸಂಭ್ರಮಾಚರಣೆಯನ್ನು ನಿಷೇಧಿಸಲಾಗಿದೆ. ಸಾಮಾನ್ಯ ಚಟುವಟಿಕೆಗಳಿಗೆ ಇಲ್ಲ ನಿರ್ಬಂಧ
  • ಹೋಟೆಲ್, ಮಾಲ್, ಪಬ್, ರೆಸ್ಟೋರೆಂಟ್‍ಗಳಲ್ಲಿ ಅದರ ಮಾಲೀಕರು ಕಡ್ಡಾಯವಾಗಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಪರಿಪಾಲನೆ ಮಾಡಬೇಕು.
  • ಥರ್ಮಲ್ ಸ್ಕೀನಿಂಗ್, ಸ್ಯಾನಿಟೈಸರ್ ಇಡುವುದು ಕಡ್ಡಾಯ. ಅಗತ್ಯವಿದ್ದಲ್ಲಿ ಜನರನ್ನು ಸರದಿ, ಆನ್‍ಲೈನ್ ಬುಕಿಂಗ್ ಇಲ್ಲವೇ ಟೋಕನ್ ಪದ್ಧತಿಯನ್ನು ಅನುಸರಿಸಬೇಕು
  • 65 ವರ್ಷ ಮೇಲ್ಪಟ್ಟವರು, 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೇ ಇರತಕ್ಕದ್ದು.
  • ಪ್ರಾಂಗಣದಲ್ಲಿ ಉಪಹಾರ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು
  • ಸರ್ಕಾರದ ಮಾರ್ಗಸೂಚಿಯಂತೆ ಹಸಿರು ಪಟಾಕಿಯನ್ನೇ ಸಿಡಿಸತಕ್ಕದ್ದು.

error: Content is protected !!