Accident | ಭದ್ರಾವತಿ ಬೈಪಾಸ್’ನಲ್ಲಿ ಭೀಕರ ಅಪಘಾತ, ಪತಿಯ ನೋಡಲು ಹೋಗುತ್ತಿದ್ದ ಪತ್ನಿ ಅಪಘಾತದಲ್ಲಿ ಸಾವು

Accident

 

 

ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತಿಯನ್ನು ನೋಡಲು ಹೋಗುವಾಗ ತಾಲೂಕಿನ ಬೈಪಾಸ್ ರಸ್ತೆಯಲ್ಲಿ ಭಾನುವಾರ ಭೀಕರ ಅಪಘಾತ ಸಂಭವಿಸಿದ್ದು, ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಓಡಿಸುತ್ತಿದ್ದ ಮೈದುನ ಗಂಭೀರ ಗಾಯಗೊಂಡಿದ್ದಾನೆ.

READ | ಶಿಕಾರಿಪುರ ಸಾರ್ವಜನಿಕ ಸಭೆಯಲ್ಲೇ ವಿಜಯೇಂದ್ರಗೆ ‘ಭಾವಿ ಎಂಎಲ್‍ಎ’ ಎಂದು ಘೋಷಿಸಿದ ಜನಸ್ತೋಮ

ತಾರೇಕಟ್ಟೆಯ ಜ್ಞಾನೇಶ್ವರಿ(26) ಮೃತರು. ಇವರು ತಮ್ಮ ಮೈದುನ ಪ್ರೇಮ್ ಸಾಗರ್ ಜತೆ ಶಿವಮೊಗ್ಗಕ್ಕೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ‌. ಜ್ಞಾನೇಶ್ವರಿ ಅವರ ಪತಿ ರಾಕೇಶ್ ಅವರು ಶಿವಮೊಗ್ಗ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತೆರಳುತ್ತಿದ್ದಾಗ ಲಾರಿಯೊಂದು ಡಿಕ್ಕಿ ಹೊಡೆದಿದೆ. ಪ್ರೇಮ್ ಸಾಗರ ಅವರ ಕಾಲು ಮತ್ತು ತಲೆಗೆ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಜ್ಜುಗುಜ್ಜಾದ ಬೈಕ್
ಬಸ್ ಪಕ್ಕದಲ್ಲೇ ಚಲಿಸುತ್ತಿದ್ದ ದ್ವಿಚಕ್ರ ವಾಹನವನ್ನು ಗಮನಿಸದೇ ಬಸ್ ಅನ್ನು ಬಲಭಾಗಕ್ಕೆ ದಿಢೀರ್ ಆಗಿ ಬಂದಿದ್ದು, ಬಸ್ಸಿಗೆ ಬೈಕ್ ತಾಕುವುದನ್ನು ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದೆ. ಲಾರಿಯ ಚಕ್ರಕ್ಕೆ ಸಿಲುಕಿದ ಬೈಕ್ ನಜ್ಜುಗುಜ್ಜಾಗಿದೆ. ಪ್ರೇಮ್ ಸಾಗರ್ ಅವರು ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಇತ್ತೀಚೆಗೆ ಶಿವಮೊಗ್ಗಕ್ಕೆ ಆಗಮಿಸಿದ್ದರು‌. ಶಿವಮೊಗ್ಗ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!