Accident | ತುಂಗಾ ಹೊಸ ಸೇತುವೆಯ ಮೇಲೆ ಅಪಘಾತ

Accident

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತುಂಗಾ ನದಿ ಹೊಸ ಸೇತುವೆಯ ಮೇಲೆ ಕಾರು ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ಮಧ್ಯೆ ಶುಕ್ರವಾರ ರಾತ್ರಿ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅರ್ಧ ಗಂಟೆ ಟ್ರಾಫಿಕ್ ಜಾಮ್ ಉಂಟಾಗಿದೆ.

READ | ಗುಜರಾತ್ ಮಾದರಿಯಲ್ಲಿ ಗೋಶಾಲೆಗಳಿಗೆ ನಿರ್ವಹಣಾ ವೆಚ್ಚ, ರಾಜ್ಯದಲ್ಲಿ 100 ಗೋಶಾಲೆಗಳ ಸ್ಥಾಪನೆ

ಕಾರಿನ ಮುಂಭಾಗ ಜಖಂ
ಕಾರು ಶಂಕರಮಠ ಕಡೆಯಿಂದ ವಿದ್ಯಾನಗರ ಕಡೆಗೆ ಬರುತ್ತಿದ್ದಾಗ ಸಾರಿಗೆ ಸಂಸ್ಥೆಯ ಬಸ್ ವಿದ್ಯಾನಗರದಿಂದ ಬರುತ್ತಿತ್ತು. ಆಗ ಮುಖಾಮುಖಿ ಡಿಕ್ಕಿಯಾಗಿದೆ. ಕಾರಿನ ಮುಂಭಾಗ ಜಖಂಗೊಂಡಿದೆ. ಪರಿಣಾಮ ಸೇತುವೆಯ ಮೇಲೆ ಅರ್ಧ ಗಂಟೆಯವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

error: Content is protected !!