Gold, Silver rate | ತಿಂಗಳ ಮೊದಲ ದಿನ ಚಿನ್ನದ ಬೆಲೆ ಸ್ಥಿರ, ಇಂದು ಚಿನ್ನ, ಬೆಳ್ಳಿಯ ಬೆಲೆಯೆಷ್ಟು? ಹೇಗಿತ್ತು ನವೆಂಬರ್ ಟ್ರೆಂಡ್?

GOLD RATE NEW

 

 

ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ನವೆಂಬರ್ ತಿಂಗಳಲ್ಲಿ ಚಿನ್ನದ ಬೆಲೆಯು ನಿರಂತರ ಏರಿಳಿತವಾಗಿದ್ದು, ಇಡೀ ತಿಂಗಳಲ್ಲಿ ಅತಿ ಹೆಚ್ಚು ಬೆಲೆ (10 ಗ್ರಾಂ 24 ಕ್ಯಾರಟ್) 53,230 ರೂ. ದಾಖಲಾದರೆ, 50,340 ಅತೀ ಕಡಿಮೆ ದರವಾಗಿದೆ.
ನವೆಂಬರ್ 1ರಂದು 50,830 ರೂ. ಇದ್ದ ಬೆಲೆಯು ಮಾಸಾಂತ್ಯಕ್ಕೆ 53,020 ರೂ.ಗೆ ಏರಿಕೆಯಾಗಿದೆ. ನವೆಂಬರ್ 1ಕ್ಕೆ ಹೋಲಿಸಿದರೆ 4ರಂದು ಬೆಲೆ ಏಕಾಏಕಿ ಇಳಿಕೆಯಾಗಿತ್ತು. ತದನಂತರ ಆರಂಭವಾದ ಏರುಗತಿ ಇದುವರೆಗೆ ತಗ್ಗಿಲ್ಲ.

READ | ಕುವೆಂಪು ವಿವಿ ಪಿಜಿ ಪ್ರವೇಶಾತಿ ಅರ್ಜಿ ಸಲ್ಲಿಕೆಯ ಗಡುವು ವಿಸ್ತರಣೆ, ಆಫ್’ಲೈನ್’ನಲ್ಲೂ ಅವಕಾಶ, ಲಾಸ್ಟ್ ಡೇಟ್ ಯಾವುದು?

ಡಿಸೆಂಬರ್ 1ರಂದು ಚಿನ್ನದ ಬೆಲೆಯು ಪ್ರತಿ 10 ಗ್ರಾಂ 22 ಕ್ಯಾರಟ್’ಗೆ 48,600 ರೂ. ಇದ್ದು, 24 ಕ್ಯಾರಟ್’ಗೆ 53,020 ರೂ. ನಿಗದಿಯಾಗಿದೆ. ನವೆಂಬರ್ 30ರಂದು 90 ರೂ. ಏರಿಕೆಯಾಗಿತ್ತು. ಅದೇ ಬೆಲೆ ಸ್ಥಿರವಾಗಿದೆ.
ನವೆಂಬರ್ ಎರಡನೇ ವಾರದ ಆರಂಭದಲ್ಲಿ 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆಯು 51,100 ರೂ. ಇತ್ತು. ಆದರೆ, 10 ದಿನಗಳ ಅಂತರದಲ್ಲಿಯೇ ಬೆಲೆಯು 2,130 ರೂ. ಏರಿಕೆಯಾಗಿತ್ತು.
ನವೆಂಬರ್ 8ರಂದು 24 ಕ್ಯಾರಟ್ (10 ಗ್ರಾಂ) ಚಿನ್ನಕ್ಕೆ 51,100 ರೂ. ಬೆಲೆಯಿತ್ತು. ಅದು ನ.18ರ ಹೊತ್ತಿಗೆ 53,230 ರೂ.ಗೆ ತಲುಪಿತ್ತು.
ಹಳದಿ ಲೋಹದ ಬೆಲೆಯು ನಿರಂತರ ಏರಿಕೆಯಾಗುತ್ತಿದ್ದು, ಚಿನ್ನಾಭರಣ ಪ್ರಿಯರಲ್ಲಿ ನಿರಾಸೆ ಮೂಡಿಸಿದೆ. ಅಪರಂಜಿ ಮತ್ತು ಆಭರಣ ಚಿನ್ನದ ಬೆಲೆಯು ನ.29ರಂದು 100 ರೂ. ಇಳಿಕೆಯಾಗಿತ್ತು.

ಚಿನ್ನದ ಬೆಲೆ (ಪ್ರತಿ 10 ಗ್ರಾಂ)
ದಿನಾಂಕ 22 ಕ್ಯಾರಟ್ 24 ಕ್ಯಾರಟ್
ನವೆಂಬರ್ 19 48,650 53,070
ನವೆಂಬರ್ 20 48,650 53,070
ನವೆಂಬರ್ 21 48,550 52,970
ನವೆಂಬರ್ 22 48,350 52,750
ನವೆಂಬರ್ 23 48,300 52,700
ನವೆಂಬರ್ 24 48,600 53,020
ನವೆಂಬರ್ 25 48,600 53,020
ನವೆಂಬರ್ 26 48,600 53,020
ನವೆಂಬರ್ 27 48,610 53,030
ನವೆಂಬರ್ 28 48,610 53,030
ನವೆಂಬರ್ 29 48,510 52,930
ನವೆಂಬರ್ 30 48,600 53,020
ಡಿಸೆಂಬರ್ 01 48,600 53,020

ಬೆಳ್ಳಿಯ ಬೆಲೆಯೂ ಸ್ಥಿರ
ಬೆಳ್ಳಿಯ ಬೆಲೆಯೂ ಸಹ ನವೆಂಬರ್ ತಿಂಗಳಲ್ಲಿ ಏರಿಳಿತ ಕಂಡಿದೆ. ಕಳೆದ ತಿಂಗಳಲ್ಲಿ ಪ್ರತಿ ಕೆಜಿ ಬೆಳ್ಳಿಯ ಅತ್ಯಧಿಕ ಬೆಲೆಯು 68,000 ರೂ. ಹಾಗೂ 59,500 ಅತೀ ಕಡಿಮೆ ಬೆಲೆಯಾಗಿದೆ. ಒಟ್ಟಾರೆ ಬೆಳ್ಳಿಯ ಬೆಲೆಯು ಏರುಗತಿಯಲ್ಲಿದ್ದು, ಬೆಲೆಯಲ್ಲಿ ಶೇ.14.29ರಷ್ಟು ಬದಲಾವಣೆಯಾಗಿದೆ. ಡಿಸೆಂಬರ್ 1ರಂದು ಕೆಜಿಗೆ 68,000 ರೂ. ಬೆಲೆ ಇದೆ.

ಬೆಳ್ಳಿಯ ಬೆಲೆ (ಪ್ರತಿ 1 ಕೆಜಿಗೆ)
ದಿನಾಂಕ ಕೆಜಿ
ನವೆಂಬರ್ 19 67,500
ನವೆಂಬರ್ 20 67,500
ನವೆಂಬರ್ 21 66,500
ನವೆಂಬರ್ 22 67,000
ನವೆಂಬರ್ 23 67,500
ನವೆಂಬರ್ 24 68,200
ನವೆಂಬರ್ 25 68,000
ನವೆಂಬರ್ 26 67,500
ನವೆಂಬರ್ 27 67,500
ನವೆಂಬರ್ 28 67,500
ನವೆಂಬರ್ 29 68,100
ನವೆಂಬರ್ 30 68,000
ಡಿಸೆಂಬರ್ 01 68,000

https://suddikanaja.com/2022/11/30/today-arecanut-rate-in-karnataka-148/

error: Content is protected !!