Stray dog attack | ಭದ್ರಾವತಿ ಪ್ರಕರಣ ಬೆನ್ನಲ್ಲೇ‌ ಪುರಲೆಯಲ್ಲಿ ಬಾಲಕಿ ಮೇಲೆ‌ ಬೀದಿನಾಯಿ ಅಟ್ಯಾಕ್

Dog injuction

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಭದ್ರಾವತಿಯಲ್ಲಿ ಬೀದಿನಾಯಿಗಳ ದಾಳಿ ಬಾಲಕ ಮೃತಪಟ್ಟ ಘಟನೆಯ ಬೆನ್ನಲ್ಲೇ ಪುರಲೆಯಲ್ಲೂ ಬೀದಿನಾಯಿ ಬಾಲಕಿಯನ್ನು ಕಡಿದ ಘಟನೆ ನಡೆದಿದೆ.

READ | ಭದ್ರಾವತಿಯಲ್ಲಿ ಬಾಲಕನ ಬಲಿ ಪಡೆದ ಬೀದಿನಾಯಿಗಳು

ಪುರಲೆಯ ಅವಿನಾಶ್ ಮತ್ತು ರೇಣುಕಾ ಅವರ ಪುತ್ರಿ ಪ್ರತೀಕ್ಷಾ ಮೇಲೆ ಬೀದಿನಾಯಿ ದಾಳಿ ನಡೆಸಿದ್ದು, ಕೈಗೆ ಕಚ್ಚಿದೆ. ಗಾಯಗೊಂಡ ಬಾಲಕಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಗೆ ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ ಅವರು‌ ಭೇಟಿ‌ ನೀಡಿ ಮಗುವಿನ ಆರೋಗ್ಯ ವಿಚಾರಿಸಿದ್ದಾರೆ. ಬೀದಿನಾಯಿಗಳ ಹಾವಳಿ ಹೆಚ್ಚಿದ್ದು ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

error: Content is protected !!