Jobs in Bhadravathi | ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ

IMG 20220517 232257 102

 

 

ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ತಾಲೂಕಿನ ವಿವಿಧೆಡೆ ಯು.ಆರ್.ಡಬ್ಲ್ಯೂ ಹಾಗೂ ವಿ.ಆರ್.ಡಬ್ಲ್ಯೂ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹರು ಅರ್ಜಿ ಸಲ್ಲಿಸಬಹುದು.

  • ನೇಮಕಾತಿ ಸಂಸ್ಥೆ– ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ
  • ಹುದ್ದೆಯ ಹೆಸರು– ಯು.ಆರ್.ಡಬ್ಲ್ಯೂ, ವಿ.ಆರ್.ಡಬ್ಲ್ಯೂ
  • ಹುದ್ದೆಗಳ ಸಂಖ್ಯೆ– ಒಟ್ಟು 8(URW 2, VRW 6)
  • ಕೊನೆಯ ದಿನಾಂಕ– 17/12/2022

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಅಂಗವಿಕಲರ ಗ್ರಾಮೀಣ ಪುನರ್ವಸತಿ ಕಾರ್ಯಕ್ರಮ ಯೋಜನೆಗೆ ಭದ್ರಾವತಿ ನಗರ ಸಭೆಯಲ್ಲಿ ಯು.ಆರ್.ಡಬ್ಲ್ಯೂ 2 ಹುದ್ದೆ ಹಾಗೂ ಭದ್ರಾವತಿ ತಾಲೂಕಿನ ತಡಸ, ಕಲ್ಲಹಳ್ಳಿ, ಬಾರಂದೂರು, ಗುಡಮಘಟ್ಟ, ಹನುಮಂತಪುರ, ಸನ್ಯಾಸಿಕೊಡಮಗ್ಗಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರೆಂದು (ವಿ.ಆರ್.ಡಬ್ಲ್ಯೂ) ಆಯ್ಕೆ ಮಾಡಲು 18 ರಿಂದ 45 ವರ್ಷ ವಯೋಮಿತಿಯೊಳಗಿನ 10ನೇ ತರಗತಿ ಪಾಸಾಗಿರುವ ಸ್ಥಳೀಯ ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.

READ | ಇಎಸ್‍ಐನಲ್ಲಿ 9 ಹುದ್ದೆಗಳಿಗೆ ನೇರ ಸಂದರ್ಶನ, ನೀವು ಪಾಲ್ಗೊಳ್ಳಿ

ಆಸಕ್ತರು ನಿಗದಿತ ನಮೂನೆ ಅರ್ಜಿಗಳನ್ನು ಭದ್ರಾವತಿ ತಾಲೂಕು ಪಂಚಾಯಿತಿ ಕಚೇರಿಯ ಎಂ.ಆರ್.ಡಬ್ಲ್ಯೂ ರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಡಿಸೆಂಬರ್ 17ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ನಿಗದಿತ ನಮೂನೆ ಅರ್ಜಿ ಮತ್ತು ಮಾಹಿತಿಗಾಗಿ ಎಂ.ಆರ್.ಡಬ್ಲ್ಯೂ ದಿನೇಶ್ ಮೊ.ಸಂ.: 7899137243 ಅನ್ನು ಸಂಪರ್ಕಿಸುವುದು.

https://suddikanaja.com/2022/12/01/dc-selvamani-took-meeting/

error: Content is protected !!