Railway | ಜನಶತಾಬ್ದಿ ಸೇರಿ ಶಿವಮೊಗ್ಗದಿಂದ ಹೊರಡುವ ವಿವಿಧ ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆ

Train

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕಡೂರು ರೈಲ್ವೆ ನಿಲ್ದಾಣದಲ್ಲಿ ಹಾಟ್ ಸ್ಟ್ಯಾಂಡ್ ಬೈ ಡ್ಯುಯೆಲ್ ವಿಡಿಯು ಸಿಸ್ಟಂ ಅಳವಡಿಕೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಡಿಸೆಂಬರ್ 5, 6ರಂದು ಶಿವಮೊಗ್ಗದಿಂದ ಹೊರಡುವ ಮತ್ತು ಬರುವ ಕೆಲವು ರೈಲುಗಳ ಸಂಚಾರ ಸ್ಥಗಿತಗೊಳಿಸಿದರೆ, ಕೆಲವು ವಿಳಂಬವಾಗಿ ಸಂಚರಿಸಲಿವೆ. ಪ್ರಯಾಣಿಕರು ಸಹಕರಿಸಬೇಕು ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

READ | ನೈರುತ್ಯ ರೈಲ್ವೆಗೆ ಸಮಯ ಪಾಲನೆಯಲ್ಲಿ ದೇಶದಲ್ಲೇ ನಂ.4ನೇ ಸ್ಥಾನ

ಯಾವ್ಯಾವ ರೈಲುಗಳ ಸಂಚಾರದ ಸಮಯ ಬದಲು?

  • ಬೆಂಗಳೂರು-ಶಿವಮೊಗ್ಗ ಜನಶತಾಬ್ದಿ ರೈಲು (ರೈಲು ಸಂಖ್ಯೆ 12089) ಡಿ.6ರಂದು ಸಮಯವನ್ನು 120 ನಿಮಿಷ ವಿಳಂಬವಾಗಿ ಹೊರಡಲಿದೆ.
  • ಶಿವಮೊಗ್ಗ- ಚಿಕ್ಕಮಗಳೂರು ಪ್ಯಾಸೆಂಜರ್ ರೈಲು (ರೈಲು ಸಂಖ್ಯೆ 07365) ಡಿಸೆಂಬರ್ 6ರಂದು ಬೀರೂರುವರೆಗೆ ಮಾತ್ರ ಸಂಚರಿಸಲಿದೆ. ಬೀರೂರು- ಚಿಕ್ಕಮಗಳೂರು ನಡುವೆ ರೈಲು ಸಂಚಾರ ಇರುವುದಿಲ್ಲ.
  • ತುಮಕೂರು- ಶಿವಮೊಗ್ಗ (ರೈಲು ಸಂಖ್ಯೆ 16567) ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯೆ 30 ನಿಮಿಷ ವಿಳಂಬವಾಗಲಿದೆ.

https://suddikanaja.com/2022/12/02/kashipura-railway-underpass-work-box-work-complete/

error: Content is protected !!