Police check post | ಶಿವಮೊಗ್ಗದಲ್ಲಿ ರಾತ್ರಿ ವೇಳೆ ಹೈ ಸೆಕ್ಯೂರಿಟಿ, 16 ಕಡೆ ಚೆಕ್ ಪೋಸ್ಟ್, ಒಂದೇ ರಾತ್ರೀಲಿ 46 ಕೇಸ್

police

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ (shimoga police department) ಬಿಗಿ‌ ಭದ್ರತೆ ಒದಗಿಸಿದ್ದು, ಶುಕ್ರವಾರ ರಾತ್ರಿ ವಿಶೇಷ ಕಾರ್ಯಾಚರಣೆ ನಡೆಸಿದ್ದು, ಒಟ್ಟು 46 ಪ್ರಕರಣಗಳನ್ನು ದಾಖಲಿಸಲಾಗಿದೆ.

READ | ಶಿವಮೊಗ್ಗದಲ್ಲಿ ಕಳ್ಳತನ, ರಾಜಸ್ಥಾನ, ನೇಪಾಳ ಲಿಂಕ್!, ಇದು ಖಾಕಿ ಪಡೆಯ ರೋಚಕ ಕಾರ್ಯಾಚರಣೆ

20 ಚೆಕ್ ಪೋಸ್ಟ್, ಕುಡಿದು ಡ್ರೈವ್ ಮಾಡಿದವರಿಗೆ ಶಾಕ್
ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಒಟ್ಟು 20 ಚೆಕ್ ಪೋಸ್ಟ್ ಗಳನ್ನು ಹಾಕಿ ವಾಹನಗಳ ತಪಾಸಣೆಯನ್ನು ಮಾಡಲಾಯಿತು. ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡುವ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಶಿವಮೊಗ್ಗ ವಿಭಾಗ 16, ಭದ್ರಾವತಿ ಉಪ ವಿಭಾಗ 3, ಸಾಗರ ಉಪ ವಿಭಾಗ 6, ಶಿಕಾರಿಪುರ ವಿಭಾಗ 5 ಮತ್ತು ತೀರ್ಥಹಳ್ಳಿ ಉಪ ವಿಭಾಗ 16 ಸೇರಿದಂತೆ ಒಟ್ಟು 46 ಡ್ರಂಕ್ ಆ್ಯಂಡ್ ಡ್ರೈವ್ (drunk & drive) ಪ್ರಕರಣಗಳನ್ನು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಚಾಲಕರ ವಿರುದ್ಧ ದಾಖಲಿಸಲಾಗಿದೆ.

https://suddikanaja.com/2022/12/16/shivamogga-police-notice-to-install-cctv-camaras-within-15-days/

error: Content is protected !!