Job Recruitment | ಉದ್ಯೋಗ ಆಕ್ಷಾಂಕ್ಷಿಗಳಿಗೆ ಶುಭ ಸುದ್ದಿ, ರಾಜ್ಯದಲ್ಲಿ ವರ್ಷದೊಳಗೆ ಒಂದು ಲಕ್ಷ ಹುದ್ದೆಗಳ ಭರ್ತಿ, ಯಾವ್ಯಾವ ಹುದ್ದೆಗಳ ನೇಮಕಾತಿ?

Basavaraj bommia

 

 

ಸುದ್ದಿ ಕಣಜ.ಕಾಂ ಬೆಳಗಾವಿ
BELAGAVI (Assembly Session): ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.58 ಲಕ್ಷ ಹುದ್ದೆಗಳನ್ನು ಒಂದು ವರ್ಷದಲ್ಲಿ ಭರ್ತಿ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್’ನಲ್ಲಿ ಜೆಡಿಎಸ್’ನ ಸಿ.ಎನ್.ಮಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಒಟ್ಟು 43 ವಿವಿಧ ಇಲಾಖೆಗಳಲ್ಲಿ ಎ ದಿಂದ ಡಿ ವರೆಗಿನ ಒಟ್ಟು 7,69,981 ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 5,1,272 ಭರ್ತಿಯಾಗಿದ್ದು, ಇನ್ನೂ 2,58,709 ಹುದ್ದೆಗಳು ಈಗಲೂ ಖಾಲಿ ಉಳಿದಿವೆ. ಇದರಲ್ಲಿ 82,700 ಸಿ ಮತ್ತು ಡಿ ವೃಂದದ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

READ | ಕೆಇಎದಿಂದ 310 ಹುದ್ದೆಗಳ ನೇಮಕಾತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಉನ್ನತ ಶಿಕ್ಷಣ ಇಲಾಖೆಯಲ್ಲಿ ಹುದ್ದೆ ಭರ್ತಿ
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 310 ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ. ಶೀಘ್ರ ಭರ್ತಿ ಮಾಡುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.

https://suddikanaja.com/2022/12/20/health-department-recruitment-various-post-in-all-districts-of-karnataka/

error: Content is protected !!