Cinema | ‘ಕಾಂತಾರ’ ಬಳಿಕ‌ ಅದೇ ಮಾದರಿಯ ಇನ್ನೊಂದು ಚಿತ್ರ ರಿಲೀಸ್’ಗೆ ಡೇಟ್ ಫಿಕ್ಸ್, ‘ವೈಶಂಪಾಯನ ತೀರ’ ಸಿನಿಮಾದಲ್ಲಿ ಅಂಥದ್ದೇನಿದೆ‌?

vaisampayana theera

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA:  ‘ವೈಶಂಪಾಯನ ತೀರ’ ( vaisampayana theera) ಸಿನಿಮಾ ಜ.6ರಂದು ಮಲ್ಟಿಪ್ಲೆಕ್ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಹಾಗೂ ರಂಗಕರ್ಮಿ ರಮೇಶ್ ಬೇಗಾರ್ (Ramesh Begar) ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಥೆಗಾರ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ಸಣ್ಣ ಕಥೆಯನ್ನು ಆಧರಿಸಿದ ಈ ಚಿತ್ರ ಯಕ್ಷಗಾನ ಕಲೆಯ ಹಿನ್ನೆಲೆಯಲ್ಲಿ ಸಾಗಿ ವೈಯಕ್ತಿಕ ಬದುಕಿನ ಸಂಬಂಧಗಳ ನಿಗೂಢತೆಯನ್ನು ಬಿಂಬಿಸುವ ಹಾಗೂ ಪ್ರಕೃತಿ ಮತ್ತು ಪುರುಷನ ಸಂಘರ್ಷ ಹೇಳುವ ಕಥೆಯಾಗಿದೆ ಎಂದು ತಿಳಿಸಿದರು.
ಮೂವತ್ತು ವರ್ಷ ಹಳೆಯ ಕಥೆಗೆ ಇಂದಿನ‌ ಟ್ರೆಂಡ್
30 ವರ್ಷದ ಹಿಂದೆ ರಚಿತವಾದ ಈ ಕಥೆಗೆ ಇಂದಿನ ಟ್ರೆಂಡ್ ಅಳವಡಿಸಲಾಗಿದೆ. ಮಣ್ಣಿನ ಮೂಲ ಸೊಗಡಾಗಿ ಈ ಚಿತ್ರ ಬಂದಿದೆ. ಪ್ರಮುಖವಾಗಿ ಮಲೆನಾಡಿನ ಶೃಂಗೇರಿ ಭಾಗದ ಜನಜೀವನ, ಭಾಷೆ, ಸಂಸ್ಕೃತಿಯನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ ಎಂದರು.

READ | ಏಕ್ ದಿನ್ ಕಾ ಕ್ರೀಡಾಧಿಕಾರಿ

ಚಿತ್ರದಲ್ಲಿ‌ ತಾರಾಗಣ
ಚಿತ್ರದಲ್ಲಿ ಕೃಷ್ಣಭಟ್ಟ, ವೆಂಕಪ್ಪ ಹೆಗಡೆ, ಕಲ್ಯಾಣಿ ಪ್ರಮುಖ ಪಾತ್ರಗಳಿವೆ. ಇವುಗಳನ್ನು ಕ್ರಮವಾಗಿ ರವೀಶ್ ಹೆಗ್ಡೆ ಐನ್‌ಬೈಲ್, ಪ್ರಸನ್ನ ಶೆಟ್ಟಿಗಾರ್, ವೈಜಯಂತಿ ಅಡಿಗ ಕಾಣಿಸಿಕೊಂಡಿದ್ದಾರೆ. ಈ ಕಥೆಗೆ ಪೂರಕವಾಗಿ ಮತ್ತೊಂದು ಕಥೆ ಇದ್ದು, ಇದರಲ್ಲಿ ಪ್ರಮೋದ್ ಶೆಟ್ಟಿ ಬಾಬು ಹಿರಣ್ಣಯ್ಯ, ರಮೇಶ್ ಪಂಡಿತ್ ಬಿ.ಎಲ್. ರವಿಕುಮಾರ್, ನಾಗಶ್ರೀ ಬೇಗಾರ್, ರಮೇಶ್ ಭಟ್, ಗುರುರಾಜ್ ಹೊಸಕೋಟೆ, ಶೃಂಗೇರಿ ರಾಮಣ್ಣನಂತಹ ಹಿರಿಯ ಕಲಾವಿದರು ನಟಿಸಿದ್ದಾರೆ. ಮುಖ್ಯವಾಗಿ ಹಾಸ್ಯ ಕಲಾವಿದರಾದ ಕುಂದಾಪುರದ ಕುಳ್ಳಪ್ಪ, ಸತೀಶ್ ಪೈ, ಸಂತೋಷ್ ಪೈ, ಸುಬ್ರಹ್ಮಣ್ಯ ಹಂಡಿಗೆ ಕಾಣಿಸಿಕೊಂಡಿದ್ದಾರೆ.
ಶಶೀರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಅವಿನಾಶ್ ಶೃಂಗೇರಿ ಸಂಕಲನ, ಅಭಿಷೇಕ್ ಹೆಬ್ಬಾರ್ ಕಲಾ ನಿರ್ದೇಶನ, ರಾಮಚಂದ್ರ ಅವರ ಸಹ ನಿರ್ದೇಶನ ಹೀಗೆ ಎಲ್ಲ ತಂತ್ರಜ್ಞರು ಮಲೆನಾಡ ನಿವಾಸಿಗಳೇ ಎಂಬುದು ವಿಶೇಷ. ಮೂರು ದಶಕಗಳ ಹಿಂದೆ ಸ್ವರ ಸಂಗಮ ಎಂಬ ಆಡಿಯೋ ಕ್ಯಾಸೆಟ್ ಉದ್ಮ ಸ್ಥಾಪಿಸಿದ್ದ ಆರ್. ಸುರೇಶ್‌ಬಾಬು ಈ ಚಿತ್ರದ ನಿರ್ಮಾಪಕರಾಗಿದ್ದಾರೆ.
ಕಾಂತಾರ ಚಿತ್ರದ ಯಶಸ್ವಿಯ ನಂತರ ಸಿನಿಮಾ ಉದ್ಯಮ ಇದೇ ಟ್ರೆಂಡ್ ಇರುವ ಚಿತ್ರಗಳನ್ನು ನಿರ್ಮಿಸಲು ಯೋಚಿಸುತ್ತಿದ್ದಾರೆ. ಈ ಚಿತ್ರವೂ ಆ ನೆರಳಿನಲ್ಲಿಯೆ ಸಾಗುತ್ತಿದೆ. ಛಾಯಾಗ್ರಾಹಕ ಶಶೀರ ಶೃಂಗೇರಿ ಇದ್ದರು.

https://suddikanaja.com/2023/01/01/sri-balaji-photo-studio-movie-release/

error: Content is protected !!