Shimoga city bus | ಸಿಟಿ ಬಸ್ ಮಾಲೀಕರಿಗೆ ಜಿಲ್ಲಾಧಿಕಾರಿ ಖಡಕ್ ವಾರ್ನಿಂಗ್

private bus stand

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದಲ್ಲಿ ಸಂಚರಿಸುವ ಬಸ್’ಗಳು‌ ನಿಗದಿಪಡಿಸಿದ ನಿಲ್ದಾಣಗಳಲ್ಲಿ ಮಾತ್ರ ಬಸ್ ನಿಲುಗಡೆ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸೂಚನೆ ನೀಡಿದ್ದಾರೆ.
ನಗರದ ಸಂಚಾರ ವೃತ್ತದ ಪೂರ್ವ ಮತ್ತು ಪಶ್ಚಿಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಸಿಟಿ ಬಸ್‍ ಸ್ಟ್ಯಾಂಡ್‍ಗಳ ಕುರಿತು ಕೆಳಕಂಡಂತೆ ಅಧಿಸೂಚನೆ ಹೊರಡಿಸಿದ್ದು, ಅಧಿಸೂಚಿತ ಬಸ್‍ ಸ್ಟ್ಯಾಂಡ್‍ಗಳಲ್ಲಿ ಮಾತ್ರ ಸಿಟಿ ಬಸ್ ನಿಲ್ಲಿಸಲು ಆದೇಶಿಸಿದ್ದಾರೆ.

ಅಧಿಸೂಚಿತ ಪ್ರದೇಶಗಳ ಮಾಹಿತಿಗಾಗಿ ಓದಿ‌ | ಇನ್ಮುಂದೆ ಕೈಮಾಡಿದಲ್ಲೆಲ್ಲ ಸಿಟಿ ಬಸ್ ನಿಲ್ಲಲ್ಲ, ಬಸ್ ನಿಲ್ದಾಣಕ್ಕೆ 117 ಜಾಗ ಫೈನಲ್

ಈ ವ್ಯಾಪ್ತಿಯಲ್ಲಿ ಪ್ರತಿ ದಿನ 61 ಸಿಟಿ ಬಸ್‍ಗಳು ಸಂಚರಿಸುತ್ತಿದ್ದು ಎಲ್ಲ ಸಿಟಿ ಬಸ್ ಚಾಲಕರು ಜಿಲ್ಲಾಡಳಿತದಿಂದ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದ ಬಸ್ ನಿಲ್ದಾಣಗಳಲ್ಲಿ ಬಸ್‍ಗಳನ್ನು ನಿಲ್ಲಿಸದೇ ಪ್ರಯಾಣಿಕರು ಕೈ ತೋರಿಸಿದ ಕಡೆಯಲ್ಲೆಲ್ಲ ರಸ್ತೆ ಮಧ್ಯದಲ್ಲೇ ಬಸ್‍ಗಳನ್ನು ನಿಲುಗಡೆ ಮಾಡುತ್ತಾ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದಾರೆ. ಈ ರೀತಿಯ ವರ್ತನೆಯಿಂದ ಅವರ ಹಿಂದೆ ಬರುವ ವಾಹನಗಳು ಮುಂದೆ ಅಥವಾ ಹಿಂದೆ ಹೋಗಲು ಆಗದೇ ಅವರು ಅಲ್ಲಿಂದ ಹೊರಡುವವರೆಗೆ ಕಾಯುವ ಸ್ಥಿತಿ ಇದ್ದು ಇದರಿಂದ ಸಾರ್ವಜನಿಕರಿಗೆ ತುಂಬ ತೊಂದರೆಯಾಗಿತ್ತಿದೆ. ಆದ್ದರಿಂದ ಅಧಿಸೂಚಿತ‌ ಸ್ಥಳಗಳಲ್ಲಿ ಮಾತ್ರ ಬಸ್‍ಗಳನ್ನು ನಿಲುಗಡೆ ಮಾಡಬೇಕೆಂದು ನಿರ್ದೇಶಿಸಿದ್ದಾರೆ.

https://suddikanaja.com/2022/12/29/students-rush-for-selfie-with-actress-asha-bhat-at-dvs-college/

error: Content is protected !!