Bike Rally | ಬೈಕ್‍ನಲ್ಲೇ ದೇಶ ಪರ್ಯಟನೆಗೆ ಹೊರಟ ಮಲೆನಾಡು ಹುಡುಗ, ಬೈಕಿನ ವಿಶೇಷಗಳೇನು?

Viju Varghese

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‍ಪೇಟೆಯ ಕೆಂಚನಾಲ ಮೂಲದ ವಿಜೂ ವರ್ಗೀಸ್ ಅವರು ತಮ್ಮ ಎನ್’ಫೀಲ್ಡ್ ಬೈಕಿನಲ್ಲಿ ದೇಶ ಪರ್ಯಟನೆಗೆ ಮುಂದಾಗಿದ್ದಾರೆ. 60 ದಿನಗಳ ಈ ಪ್ರಯಾಣದುದ್ದಕ್ಕೂ ವಿವಿಧ ರಾಜ್ಯಗಳ ಚಿಟಿಕೆ ಮಣ್ಣು ಸಂಗ್ರಹಿಸಿ, ಸಮಾನತೆಯ ಮಂತ್ರ ಸಾರಲಿದ್ದಾರೆ.
ತಮ್ಮ ಹುಟ್ಟೂರು ಕೆಂಚನಾಲದಿಂದ ಪ್ರಯಾಣ ಆರಂಭಿಸಿದ್ದು, ಶಿವಮೊಗ್ಗಕ್ಕೆ ಆಗಮಿಸಿದ್ದು ಜಿಪಂ ಮಾಜಿ ಸದಸ್ಯ ಕೆ.ಈ.ಕಾಂತೇಶ್ ಅವರು ಅವರನ್ನು ಬರಮಾಡಿಕೊಂಡು ಶಿವಮೊಗ್ಗದಲ್ಲಿ ಶುಭ ಕೋರಿದರು.

Bike rally viju
ವಿಶಿಷ್ಟ ಬೈಕಿನಲ್ಲಿ ವಿಜೂ ವರ್ಗೀಸ್ ದೇಶ ಪರ್ಯಟನೆ

READ | ಮಾರಿಕಾಂಬಾ ಜಾತ್ರೆ, ಗಮನಸೆಳೆದ ರಾಷ್ಟ್ರಮಟ್ಟದ ಕುಸ್ತಿ, ಅಖಾಡದಲ್ಲಿ ಘಟಾನುಘಟಿಗಳ ರೋಚಕ ಪಂದ್ಯ

ಎಲ್ಲೆಲ್ಲಿ ಪಯಣ?
ವಿಜೂ ವರ್ಗೀಸ್ ಅವರು ತೆಲಂಗಾಣ, ಬೆಂಗಳೂರು, ಚೆನ್ನೈ, ಪಾಂಡಿಚೇರಿ, ಧನುಷ್ಕೋಡಿ, ಕನ್ಯಾಕುಮಾರಿ, ಕೇರಳ, ಮಂಗಳೂರು, ಉಡುಪಿ, ಕಾರವಾರ, ಗೋವಾ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಹರ್ಯಾಣ, ದೆಹಲಿ, ಕಾಶ್ಮೀರ, ಉತ್ತರಾಖಂಡ, ನೇಪಾಳ, ಅಸ್ಸಾಂ, ಮಿಜೋರಾಂ, ನಾಗಾಲ್ಯಾಂಡ್, ಮಣಿಪುರದ ಮೂಲಕ ಕರ್ನಾಟಕಕ್ಕೆ ಆಗಮಿಸಲಿದ್ದಾರೆ.
ವರ್ಗೀಸ್ ಚಿಂತನೆ ಎಲ್ಲರಿಗೂ ಮಾದರಿ
ಕಾಂತೇಶ್ ಮಾತನಾಡಿ, ದೇಶದ ಎಲ್ಲ ನದಿಗಳ ಮಣ್ಣು ಮತ್ತು ನೀರನ್ನು ಸಂಗ್ರಹಿಸಿ ತರಲು ಬೈಕ್ ರ್ಯಾಲಿ ಹಮ್ಮಿಕೊಂಡಿರುವ ವಿಜೂ ವರ್ಗೀಸ್ ಚಿಂತನೆ ಎಲ್ಲರಿಗೂ ಮಾದರಿಯಾಗಿದೆ ಹೇಳಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್, ಕಲಗೋಡು ರತ್ನಾಕರ್, ಶಿವಕುಮಾರ್, ವಿಜು ವರ್ಗೀಸ್ ಅವರ ತಾಯಿ ಹಾಗೂ ಸ್ನೇಹಿತರು ಇದ್ದರು.
ಬೈಕಿನ ವೈಶಿಷ್ಟ್ಯಗಳೇನು?
ಎನ್ ಫೀಲ್ಡ್ ಬೈಕಿನಲ್ಲಿ ಪ್ರಯಾಣ ಮಾಡಲಿದ್ದಾರೆ. ಪ್ರಯಾಣಕ್ಕೆ ಅನುಕೂಲವಾಗುವಂತೆ ಬೈಕ್ ಅನ್ನು ಅಲ್ಟರೇಷನ್ ಮಾಡಿಸಿದ್ದಾರೆ. ಸಂಚಾರಕ್ಕೆ ಬೇಕಾದ ಪೆಟ್ರೋಲ್ ತುಂಬಲು ಎರಡು ಪ್ರತ್ಯೇಕ ಕ್ಯಾನ್’ಗಳು, ಲಗೇಜ್’ಗೆ ಪ್ರತ್ಯೇಕ ಬಾಕ್ಸ್, ಮಣ್ಣು ಸಂಗ್ರಹಿಸಿಡಲು ದೊಡ್ಡ ಬಾಕ್ಸ್, ಕ್ಯಾಮೆರಾ, ಮೊಬೈಲ್ ಇಟ್ಟುಕೊಳ್ಳಲು ಪ್ರತ್ಯೇಕ ವ್ಯವಸ್ಥೆ, ಬೈಕಿನ ಎರಡು ಟೈಯರ್’ಗಳ ಗಾಳಿ ತಿಳಿಯುವ ಡಿಜಿಟಲ್ ವ್ಯವಸ್ಥೆ ಮಾಡಲಾಗಿದೆ. ನಿರಂತರ ಪ್ರಯಾಣ ಮಾಡಬೇಕಾಗಿರುವುದರಿಂದ ಬೈಕ್ ಕೂಲರ್ ವ್ಯವಸ್ಥೆಯೂ ಮಾಡಲಾಗಿದೆ. ಗೈರ್ ಅನ್ನು ಬಲಭಾಗದಿಂದ ಎಡ ಭಾಗಕ್ಕೆ ಬದಲಿಸಲಾಗಿದೆ. ಇವರು 9 ವರ್ಷಗಳ ಹಿಂದೆ ಏಕಾಂಗಿಯಾಗಿ ದಕ್ಷಿಣ ಭಾರತ ಸುತ್ತಿದ್ದರು.

https://suddikanaja.com/2022/12/25/pm-narendra-modi-talk-on-shivamoggas-entrepreneur-in-mann-ki-baat/

error: Content is protected !!