DCC Bank | ಡಿಸಿಸಿ‌ ಬ್ಯಾಂಕ್ ಸಂದರ್ಶನ ದಿನಾಂಕ ಬದಲಾವಣೆ, ಯಾವಾಗ ನಡೆಯಲಿವೆ ಇಂಟರ್ ವ್ಯೂ?

DCC Bank shivamogga

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಡಿಸಿಸಿ (ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ.) ಬ್ಯಾಂಕಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ನಡೆಸಲು ಉದ್ದೇಶಿಸಿದ್ದ ಸಂದರ್ಶನ ದಿನಾಂಕವನ್ನು ಮುಂದೂಡಲಾಗಿದೆ ಎಂದು ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

READ | ಡಿಸಿಸಿ ಬ್ಯಾಂಕ್ ವಿವಿಧ ಹುದ್ದೆಗಳ ನೇಮಕಾತಿ ಕಟ್ ಆಫ್ ಅಂಕ ಪ್ರಕಟ, ಹುದ್ದೆವಾರು ಮಾಹಿತಿ ಇಲ್ಲಿದೆ

ಕಿರಿಯ ಸಹಾಯಕರು/ ನಗದು ಗುಮಾಸ್ತರು/ ಕ್ಷೇತ್ರಾಧಿಕಾರಿಗಳು, ಅಟೆಂಡರ್ ವಾಹನ ಚಾಲಕರ ಹಾಗೂ ಜಲಗಾರರ ಹುದ್ದೆಗಳಿಗೆ ಸಂದರ್ಶನ ದಿನಾಂಕವನ್ನು ಕಾರಣಾಂತರಗಳಿಂದ ಬದಲಾವಣೆ ಮಾಡಲಾಗಿದೆ.
ಹೊಸ ದಿನಾಂಕ ನಿಗದಿ
ಫೆ. 25 ಕ್ಕೆ ನಡೆಯಬೇಕಿದ್ದ ಸಂದರ್ಶನವನ್ನು ಫೆ. 28 ಕ್ಕೆ ಹಾಗೂ ಫೆ.26 ರಂದು ನಡೆಯಬೇಕಿದ್ದ ಸಂದರ್ಶನವನ್ನು ಮಾ.1 ರಂದು ನಡೆಸಲು ತೀರ್ಮಾನಿಸಲಾಗಿದೆ. ಸಂಬಂಧಿಸಿದ ಅಭ್ಯರ್ಥಿಗಳಿಗೆ ಸಂದರ್ಶನ ಕರೆಯೋಲೆ ಕಳುಹಿಸಲಾಗಿದೆ. ಇನ್ನುಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.

error: Content is protected !!