Polling Station | ಶಿವಮೊಗ್ಗದ ಒಂದು ಮತಗಟ್ಟೆ ಶಿಫ್ಟ್, ಯಾವ ಮತಗಟ್ಟೆ, ಏನು ಕಾರಣ?

Election updates

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: 111-ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 155 ಈ ಹಿಂದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಿಳ್ಳಂಗೆರೆಯಲ್ಲಿ ಇತ್ತು. ಹಾಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣಕ್ಕಾಗಿ ಈ ಕಟ್ಟಡವನ್ನು ತೆರವುಗೊಳಿಸಿರುವುದರಿಂದ ಅದೇ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ ಪಿಳ್ಳಂಗೆರೆ ಶಾಲಾ ಕಟ್ಟಡದಲ್ಲಿ ಈ ಮತಗಟ್ಟೆಗಳನ್ನು ಬದಲಾವಣೆ ಮಾಡಿ ಭಾರತ ಚುನಾವಣಾ ಆಯೋಗವು ಅನುಮೋದಿಸಿರುತ್ತದೆ.

READ | ತೀರ್ಥಹಳ್ಳಿಯಲ್ಲಿ ಕಾಡಾನೆಯನ್ನು ಸೆರೆಹಿಡಿದ್ದಿದ್ದೇ ಒಂದು ರೋಚಕ ಕಥೆ, 8-9 ದಿನಗಳ ಕಾರ್ಯಾಚರಣೆ ಹೇಗಿತ್ತು?

ಮತಗಟ್ಟೆ ಸಂಖ್ಯೆ 155 ಹಾಗೂ 156 ಸರ್ಕಾರಿ ಪ್ರೌಢ ಶಾಲೆ ಪಿಳ್ಳಂಗೆರೆಯಲ್ಲಿ ಮುಂದುವರಿಯುತ್ತದೆ ಎಂಬ ಅಂಶವನ್ನು ಮತದಾರರಿಗೆ ತಿಳಿಯಪಡಿಸಿದೆ ಎಂದು ಸಹಾಯಕ ಮತದಾರರ ನೊಂದಣಾಧಿಕಾರಿ 111-ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಹಾಗೂ ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್ ಪರಶುರಾಮ ಸತ್ತಿಗೇರಿ ತಿಳಿಸಿದ್ದಾರೆ.

error: Content is protected !!