Bhagiratha Cup | ಭಗೀರಥ ಕಪ್ ಮುಡಿಗೇರಿಸಿಕೊಂಡ ಕುಂಸಿ ತಂಡ

Bhagiratha cup

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಇತ್ತೀಚಿಗೆ ಕೃಷಿ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಪಂದ್ಯಾವಳಿ ನಡೆಯಿತು.
ಸಾಗರ, ಕಾಶಿಪುರ, ಬೊಮ್ಮನಕಟ್ಟೆ, ಶಿವಮೊಗ್ಗ ಸಿಟಿ, ಹೊಳೆಹೊನ್ನೂರು, ಭದ್ರಾವತಿ, ಮಾರಶೆಟ್ಟಿಹಳ್ಳಿ, ತಟ್ಟೆಹಳ್ಳಿ, ಕುಂಸಿ, ಹಾರನಹಳ್ಳಿ ಒಟ್ಟು 10 ತಂಡಗಳು ಭಾಗವಹಿಸಿದ್ದವು.
ಭಗೀರಥ ಕಪ್ 2023 ಕುಂಸಿ ತಂಡ ಮೊದಲ ಸ್ಥಾನ ಪಡೆದರೆ ಕಾಶಿಪುರ ತಂಡವು ದ್ವಿತೀಯ ಸ್ಥಾನ ತೃತಿಯ ಸ್ಥಾನ ಗಳಿಸಿತು. ಮಾರಶೆಟ್ಟಿಹಳ್ಳಿ ಮತ್ತು ಶಿವಮೊಗ್ಗ ಸಿಟಿ ಡ್ರಾಗೆ ಈ ವರ್ಷದ ಕಪ್ ಅಂತ್ಯಗೊಂಡಿತು. ಜೊತೆಗೆ ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ಸಹ ಸನ್ಮಾನಿಸಲಾಯಿತು.

READ | ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ, ಶಿವಮೊಗ್ಗದ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಘೋಷಣೆ

ಶಿವಮೊಗ್ಗ ಜಿಲ್ಲೆಯಿಂದ ಬಂದಿದ್ದಂತಹ ಎಲ್ಲ ಯುವಕರುಗಳು ಸ್ಪಂದಿಸಿ ನಮ್ಮ ಸಮಾಜವು ಒಟ್ಟಾಗಿ ಸೇರಿ ಒಗ್ಗಟ್ಟಿನ ಮಂತ್ರವೆಂದು ತೋರಿಸಿಕೊಟ್ಟರು. ಈ ವರ್ಷವೂ ಕಪ್ ನಡೆಯಲು ಭಗೀರಥ ಸ್ಪೋಟ್ರ್ಸ್ ಅಕಾಡೆಮಿ ವತಿಯಿಂದ ಮಾರ್ಗದರ್ಶಕರ ಸಲಹೆ ಸಮಿತಿಯ ಜೊತೆಗೆ ಎಲ್ಲ ಗ್ರಾಮದ ಯಜಮಾನರುಗಳು, ದೇವಸ್ಥಾನದ ಗೌಡರುಗಳ ಸಲಹೆಯಂತೆ ಭಗೀರಥ ಕಪ್ 2023 ಯಶಸ್ವಿಗೆ ಕಾರಣವಾಯಿತು.
ಆಯೋಜಕರುಗಳಾಗಿ ಅಕಾಡೆಮಿ ಸ್ಥಾಪಕ ಮುರಳಿ ಎಚ್.ಸಣ್ಣಕ್ಕಿ, ಎಸ್.ವಿ.ನವೀನ್ ಕುಮಾರ್, ಎಂ.ಗುರುಪ್ರಸಾದ್, ಸಂಜಯ್, ಭರತ್, ಆರ್.ವಿ.ಕಾರ್ತಿಕ್, ಎನ್.ಮಂಜುನಾಥ್, ಎನ್.ಮಾಲತೇಶ್, ಅಣ್ಣಪ್ಪ ಸಹಕಾರ ನೀಡಿದ್ದಾರೆ.

‘ಅಕಾಡೆಮಿ’ ಶಬ್ದ ಈಗ ಸಂಸ್ಥೆ, ಆಗ ವ್ಯಕ್ತಿಯ ಹೆಸರು!

error: Content is protected !!