ರೈತ ಸಂಘದ ಮುಖಂಡರು ಸಾಮೂಹಿಕವಾಗಿ ಜಿಯೋದಿಂದ ಏರ್‍ಟೆಲ್‍ಗೆ ಪೋರ್ಟ್ ಆಗಲು ಕಾರಣವೇನು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ಕಾರ್ಪೋರೇಟ್ ಕಂಪೆನಿಗಳ ಪರವಾಗಿದ್ದು, ಇದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಸಾಮೂಹಿಕವಾಗಿ ಜಿಯೋ ನೆಟವರ್ಕ್‍ನಿಂದ ಏರ್‍ಟೆಲ್ ಚಂದಾದಾರರಾದರು.

ರಾಜ್ಯದ 3 ನಗರಗಳನ್ನು ಸ್ಮಾರ್ಟ್ ಸಿಟಿಗೆ ಸೆಂಟ್ರಲ್‍ಗೆ ಮನವಿ

ನಗರದ ಶಿವಮೂರ್ತಿ ವೃತ್ತದಲ್ಲಿರುವ ಏರ್‍ಟೆಲ್ ಕಚೇರಿ ಮುಂದೆ ಸೇರಿದ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮುಖಂಡತ್ವದಲ್ಲಿ ರೈತ ಸಂಘದ ಕಾರ್ಯಕರ್ತರು ಏರ್‍ಟೆಲ್‍ಗೆ ಪೋರ್ಟ್ ಆದರು.
ರಾಜ್ಯಾದ್ಯಂತ ಆಂದೋಲನ: ಜಿಯೋದಿಂದ ಬೇರೆಯ ನೆಟ್‍ವರ್ಕ್‍ಗೆ ಪೋರ್ಟ್ ಆಗುವ ಮೂಲಕ ಅಂಬಾನಿ, ಅದಾನಿ ವ್ಯವಹಾರಕ್ಕೆ ಹೊಡೆತ ನೀಡಲು ರಾಜ್ಯಾದ್ಯಂತ ರೈತ ಸಂಘ ಆಂದೋಲನ ರೂಪಿಸುತ್ತಿದೆ. ಇದರ ಭಾಗವಾಗಿ ಶಿವಮೊಗ್ಗದಲ್ಲೂ ಆಂದೋಲನಕ್ಕೆ ಬೆಂಬಲ ನೀಡಲಾಯಿತು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಹಿಟ್ಟೂರು ರಾಜು, ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇ.ಬಿ ಜಗದೀಶ್, ಜಿಲ್ಲಾ ಮುಖಂಡ ಪಿ.ಶೇಖರಪ್ಪ, ಎಂ.ಡಿ.ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

error: Content is protected !!