Shivamogga airport | ಶಿವಮೊಗ್ಗ ವಿಮಾನ‌‌ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಮುಖ ಸಂವಾದ, ಯಾರೊಂದಿಗೆ, ಕಾರಣವೇನು?

Modi Haki Piki

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸೋಗಾನೆ(Sogane)ಯಲ್ಲಿರುವ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ‌(Narendra modi) ಅವರು ಹಕ್ಕಿಪಿಕ್ಕಿಗಳ ಜೊತೆ ಪ್ರಮುಖ ಸಂವಾದ ನಡೆಸಿದರು.
ಹಕ್ಕಿಪಿಕ್ಕಿ‌ ಜನಾಂಗದ ಸುಮಾರು 45 ಜನ ಸಂವಾದದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಅವರ ಕಷ್ಟ-ಸುಖಗಳನ್ನು ಕೇಳಿದ ಮೋದಿ ಸುಮಾರು 5 ನಿಮಿಷಗಳ‌ ಕಾಲ‌ ಸಂವಾದದಲ್ಲಿ ಪಾಲ್ಗೊಂಡರು.
ಆಯನೂರಿನಲ್ಲಿ ನಡೆಯಲಿದ್ದ ಸಮಾವೇಶದಲ್ಲಿ ಪಾಲ್ಗೊಳ್ಳಲು ಭಾನುವಾರ ಶಿವಮೊಗ್ಗಕ್ಕೆ ಆಗಮಿಸಿದ ಅವರು ಹಕ್ಕಿಪಿಕ್ಕಿಗಳ ಜೊತೆ ಮಾತನಾಡುವುದಕ್ಕೆ ಮುಂಚೆಯೇ ನಿರ್ಧರಿಸಲಾಗಿತ್ತು. ಅದರಂತೆ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಆಯನೂರಿಗೆ ಆಗಮಿಸಿದರು.

READ | ಕಾಂಗ್ರೆಸ್ ವಿರುದ್ಧ ಮೋದಿ ಮಾಡಿದ ಮೂರು ಗಂಭೀರ ಆರೋಪಗಳಿವು

ಸುಡಾನ್’ನಲ್ಲಿ‌ ಸಿಲುಕಿದ್ದವರ ರಕ್ಷಣೆ
ನರೇಂದ್ರ ಮೋದಿ ಹಕ್ಕಿಪಿಕ್ಕಿಗಳ‌ ಜೊತೆ ಸಂವಾದ ನಡೆಸುವುದರ ಪ್ರಮುಖ ಉದ್ದೇಶ ಸುಡಾನ್ ನಲ್ಲಿ ಸಿಲುಕಿದ್ದ ಇವರನ್ನು ರಕ್ಷಿಸಿದ್ದು. ಸುಡಾನ್’ನಲ್ಲಿ ಸಿಲುಕಿದ್ದ ಸುಮಾರು‌ 4 ಸಾವಿರ ಜನ ಹಕ್ಕಿಪಿಕ್ಕಿಗಳನ್ನು ರಕ್ಷಿಸಿ ಭಾರತಕ್ಕೆ ಸುರಕ್ಷಿತವಾಗಿ ತರಲಾಗಿದ್ದು, ಅದರಲ್ಲಿ‌ ಶಿವಮೊಗ್ಗದ ನೂರು ಜನರಿದ್ದಾರೆ. ಆ ಪೈಕಿ, 45 ಜನರಿಗೆ ಸಂವಾದಕ್ಕಾಗಿ‌ ಕರೆದುಕೊಂಡು ಬರಲಾಗಿತ್ತು. ಅವರು ತಮ್ಮ ಸಾಂಪ್ರದಾಯಿಕ ಪೋಷಾಕಿನಲ್ಲಿಯೇ ಬಂದಿದ್ದು ವಿಶೇಷ ಎನಿಸಿತು.
ಕೃತಜ್ಞತೆ ಸಲ್ಲಿಸಿದ ಹಕ್ಕಿಪಿಕ್ಕಿಗಳು
ಸುಡಾನ್ ದೇಶದಲ್ಲಿ‌ ಸಿಲುಕಿದ್ದ ತಮ್ಮನ್ನು ಭಾರತಕ್ಕೆ ಮರಳುವಂತೆ ಮಾಡಿದ್ದಕ್ಕೆ ಹಕ್ಕಿಪಿಕ್ಕಿಗಳು ಮೋದಿಗೆ ಕೃತಜ್ಞತೆ ಸಲ್ಲಿಸಿದರು. ತಮ್ಮೊಂದಿಗೆ ನಿಂತಿದ್ದಕ್ಕೆ ಸಂವಾದಕ್ಕೂ ಅವಕಾಶ ನೀಡಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.

Vote from home | ಶಿವಮೊಗ್ಗ ಜಿಲ್ಲೆಯಲ್ಲಿ ಎಷ್ಟು ಜನ ಮನೆಯಿಂದ ಮತ ಚಲಾಯಿಸಿದ್ದಾರೆ?

error: Content is protected !!