ಕೋರ್ಟ್ ಸರ್ಕಲ್‍ನಲ್ಲಿ ಜನವೋ ಜನ, ಸೋಲು ಗೆಲುವಿನ ಲೆಕ್ಕಾಚಾರ, ಸದ್ಯ ಹೇಗಿದೆ ಸ್ಥಿತಿ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಬೆಳಗ್ಗೆ 8ರಿಂದ ಆರಂಭಗೊಂಡಿದ್ದು, ಅಭ್ಯರ್ಥಿಗಳ ಬೆಂಬಲಿಗರು, ಗ್ರಾಮಸ್ಥರು ಎಣಿಕೆ ಕೇಂದ್ರದ ಹೊರಗೆ ಕಾಯುತ್ತಿದ್ದಾರೆ.

ವಿಡಿಯೋ ರಿಪೋರ್ಟ್

ನಗರದ ರಾಷ್ಟ್ರೀಯ ಪಿಯು ಕಾಲೇಜಿನಲ್ಲಿ ಶಿವಮೊಗ್ಗ ತಾಲೂಕಿನ ಮತ ಎಣಿಕೆ ನಡೆಯುತ್ತಿದ್ದು, ಕೋರ್ಟ್ ಸರ್ಕಲ್‍ನಿಂದ ಡಿವಿಎಸ್ ಕಾಲೇಜುವರೆಗಿನ ರಸ್ತೆ ಜನಸ್ತೋಮದಿಂದ ತುಂಬಿದೆ.

ಎಷ್ಟು ಕೇಂದ್ರದಲ್ಲಿ ನಡೆಯುತ್ತಿದೆ ಮತ ಎಣಿಕೆ

ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರದಲ್ಲಿ ಕೈಹಿಸುಕುತ್ತ ಬೆಂಬಲಿಗರು ಕುಳಿತಿದ್ದಾರೆ.
ಬಿಗಿ ಬಂದೋಬಸ್ತ್, ಐಡಿ ಇದ್ದರಷ್ಟೇ ಎಂಟ್ರಿ: ಮತ ಎಣಿಕೆ ಕೇಂದ್ರದ ಒಳಗೆ ಗುರುತಿನ ಚೀಟಿ ಇದ್ದರಷ್ಟೇ ಪ್ರವೇಶಿಸಲು ಅವಕಾಶ ಇರುವುದರಿಂದ ಮತ ಎಣಿಕೆ ಎಪ್‍ಡೇಟ್‍ಗಳನ್ನು ಒಳಗಿರುವ ತಮ್ಮವರಿಂದ ಪಡೆಯಲಾಗುತ್ತಿದೆ. ಹೀಗೆ, ಪಂಚಾಯಿತಿ ಚುನಾವಣೆಯ ಬಿಸಿ ಮತ ಎಣಿಕೆ ಕೇಂದ್ರದ ಸುತ್ತಲೂ ಆವರಿಸಿದೆ.
ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸ್ ಸಿಬ್ಬಂದಿ ನಿಯೋಜಿಸಿಲಾಗಿದೆ. ಕುವೆಂಪು ರಂಗಮಂದಿರದ ಎದುರುಗಡೆ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

error: Content is protected !!