Kuvempu University | ಮಗಳ ಬರ್ತ್ ಡೇಗೆ ಸುತ್ತೋಲೆ ಹೊರಡಿಸಿ ಪೇಚಿಗೆ ಸಿಲುಕಿದ ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ

Kuvempu VV

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕುವೆಂಪು ವಿಶ್ವವಿದ್ಯಾಲಯ(Kuvempu University )ದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ (Prof.B.P.Veerabhadrappa) ಅವರು ಮಗಳ ಜನ್ಮದಿನದ ಸಂತೋಷಕೂಟಕ್ಕೆ ಸುತ್ತೋಲೆ (circular) ಹೊರಡಿಸುವ ಮೂಲಕ ಪೇಚಿಗೆ ಸಿಲುಕಿದ್ದಾರೆ.
ಸರ್ಕಾರಿ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ವೈಯಕ್ತಿಕ ಸಮಾರಂಭಗಳಿಗೆ ಸರ್ಕಾರಿ ಸುತ್ತೋಲೆ ಬಳಸುವಂತಿಲ್ಲ. ಆದರೆ, ಕುವೆಂಪು ವಿವಿ ಕುಲಪತಿ ಸರ್ಕಾರಿ ಸುತ್ತೋಲೆ ಮೂಲಕ ವೈಯಕ್ತಿಕವಾಗಿ ಆಹ್ವಾನಿಸುವ ಮೂಲಕ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

Veerabhadrappa Kuvempu vv
ಪ್ರೊ.ಬಿ.ಪಿ.ವೀರಭದ್ರಪ್ಪ

READ | ಕರ್ನಾಟಕ ಕ್ಯಾಬಿನೆಟ್ ರಚನೆ, ಯಾರಿಗೆ ಯಾವ ಖಾತೆ ಹಂಚಿಕೆ, ಮಧುಗೆ ಯಾವ ಖಾತೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಸುತ್ತೋಲೆಯಲ್ಲಿ ಏನಿದೆ?
“ಮೇ 28ರಂದು ಮಧ್ಯಾಹ್ನ 12.30ಕ್ಕೆ ವಿಶ್ವವಿದ್ಯಾಲಯದ ಆವರಣದಲ್ಲಿರುವ ಕುಲಪತಿಯ ಗೃಹದಲ್ಲಿ ಸಂತೋಷಕೂಟವನ್ನು ಏರ್ಪಡಿಸಿದದೆ. ವಿವಿಯ ಎಲ್ಲ ಅಧ್ಯಾಪಕರು, ಅಧ್ಯಾಪಕೇತರ ನೌಕರರು, ಅತಿಥಿ ಉಪನ್ಯಾಸಕರು, ಏಜೆನ್ಸಿ ನೌಕರರು ತಪ್ಪದೇ ಹಾಜರಾಗಬೇಕು ಎಂದು ಕೋರಲಾಗಿದೆ. ಇದನ್ನು ವೈಯಕ್ತಿಕ ಆಹ್ವಾನವೆಂದು ಭಾವಿಸಿ ಎಲ್ಲರೂ ಈ ಸಂತೋಷಕೂಟದಲ್ಲಿ ಭಾಗವಹಿಸಬೇಕು ಎಂದು ಕೇಳಿಕೊಳ್ಳುತ್ತೇನೆ” ಎಂದು ಸುತ್ತೋಲೆಯಲ್ಲಿ ಬರೆಯಲಾಗಿದೆ. ಸುತ್ತೋಲೆ ಪತ್ರದಲ್ಲಿ ಕುಲಪತಿ ಅವರ ಸಹಿ ಹಾಗೂ ಲೆಟರ್ ಹೆಡ್ ಕೂಡ ಇದೆ.

E Bus Facility | ಶಿವಮೊಗ್ಗ- ಬೆಂಗಳೂರು KSRTC ಎಸಿ ಇ-ಬಸ್ ಕಾರ್ಯಾರಂಭ, ಎಷ್ಟಿದೆ ದರ? ಬಸ್ ವಿಶೇಷಗಳೇನು?

error: Content is protected !!