ADC Committee  | ಕೈಮಗ್ಗ, ಜವಳಿ ಇಲಾಖೆ ಸಮಗ್ರ ತನಿಖೆಗೆ ಎಡಿಸಿ ನೇತೃತ್ವದಲ್ಲಿ ಸಮಿತಿ, ಡಿಸಿ ಮಹತ್ವದ ಘೋಷಣೆ

Shivamogga DC Dr R Selvamani

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಜಿಲ್ಲಾಧಿಕಾರಿ ಕಚೇರಿ (Shimoga DC office) ಮುಂದೆ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ(Charaka Women’s Multipurpose Industrial Co-operative Society Ltd)ದ ಮಹಿಳೆಯರು ಶುಕ್ರವಾರ ಚರಕ ಪ್ರಸನ್ನ (Charaka Prasanna) ನೇತೃತ್ವದಲ್ಲಿ ಮುಷ್ಕರ ನಡೆಸುತ್ತಿದ್ದು, ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ ಬಳಿಕ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ (Shimoga DC Dr.R.Selvamani) ಅವರು “ಎಡಿಸಿ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು’ ಎಂದು ಘೋಷಿಸಿದ್ದಾರೆ.

Charaka Prasanna
ಧರಣಿಯಲ್ಲಿ ರಂಗಕರ್ಮಿ ಚರಕ ಪ್ರಸನ್ನ

READ | ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕುಳಿತ ಚರಕ ಪ್ರಸನ್ನ, ಕಾರಣವೇನು?

ಜಿಲ್ಲಾಧಿಕಾರಿ ಘೋಷಣೆಯ ಬಳಿಕವೂ ಧರಣಿ ಮುಂದುವರಿದಿದ್ದು, ಈ ಸಂಬಂಧ ಲಿಖಿತವಾಗಿ ಭರವಸೆ ನೀಡುವಂತೆ ಚರಕ ಪ್ರಸನ್ನ ಕೋರಿದ್ದಾರೆ. ಅದಕ್ಕೆ ಡಿಸಿ ಸಹ ಸ್ಪಂದಿಸಿದ್ದಾರೆ.
ಕೈಮಗ್ಗ ಮತ್ತು ಜವಳಿ ಇಲಾಖೆಯ ನೀತಿನಿಯಮಗಳ ಸಮಗ್ರ ಹಾಗೂ ಸ್ವತಂತ್ರ ತನಿಖೆ ಮಾಡಬೇಕೆಂದು ಧರಣಿ ನಡೆಸುತ್ತಿದ್ದು, ಬೇಡಿಕೆಗೆ ಡಿಸಿ ಸ್ಪಂದನೆ ನೀಡಿದ್ದಾರೆ. ಎಡಿಸಿ ನೇತೃತ್ವದಲ್ಲಿ ತನಿಖೆ ನಡೆಸಿ, ಅಧಿಕಾರಿಗಳು ತಪ್ಪೆಸಗಿದ್ದರೆ ಖಂಡಿತ ಅಂಥವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಮಾಧ್ಯಮಗಳಿಗೆ ಡಿಸಿ ಪ್ರತಿಕ್ರಿಯೆ ನೀಡಿದರು.
ಡಿಸಿಯೇ ಬರಬೇಕೆಂದು ಪಟ್ಟು
ಡಿಸಿ ಕಚೇರಿ ಪಕ್ಕದ ರಸ್ತೆಯ ಬದಿಯಲ್ಲಿ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ಮಹಿಳೆಯರು ಧರಣಿ ನಡೆಸುತ್ತಿದ್ದರು. ಪೊಲೀಸರು ಬಂದು ಡಿಸಿ ಕಚೇರಿ ಆವರಣದೊಳಗೆ ಪ್ರತಿಭಟನೆಗೆ ನಿಗದಿಪಡಿಸಿರುವ ಜಾಗಕ್ಕೆ ಬರುವಂತೆ ಕೋರಿದರು. ಅದಕ್ಕೆ ಬಗ್ಗದ ಹೋರಾಟಗಾರರು ಡಿಸಿ ಬರುವವರೆಗೆ ಅಲ್ಲಿಯೇ ಕುಳಿತುಕೊಳ್ಳುವುದಾಗಿ ಪಟ್ಟು ಹಿಡಿದರು. ಜಿಲ್ಲಾಡಳಿತದ ಪರವಾಗಿ ಅಧಿಕಾರಿಯೊಬ್ಬರು ಮನವಿ ಸ್ವೀಕರಿಸಲು ಬಂದರು. ಆಗ ಅದನ್ನು ತಿರಸ್ಕರಿಸಿದ ಪ್ರಸನ್ನ ಅವರು ಡಿಸಿ ಅವರೇ ಬರುವಂತೆ ಕೋರಿದರು.

Karnataka cabinet | ಕರ್ನಾಟಕ ಕ್ಯಾಬಿನೆಟ್ ರಚನೆ, ಯಾರಿಗೆ ಯಾವ ಖಾತೆ ಹಂಚಿಕೆ, ಮಧುಗೆ ಯಾವ ಖಾತೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

error: Content is protected !!