ರೂಪಾಂತರ ಕೊರೊನಾ | ಶಿವಮೊಗ್ಗದಲ್ಲಿ ಮತ್ತೆ ಶುರುವಾಯ್ತು ಸೀಲ್ ಡೌನ್ ಪ್ರವರ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಇನ್ನೇನು ಚೀನಿ ವೈರಸ್‍ನಿಂದ ಬಿಡುಗಡೆ ಸಿಕ್ಕಿತು ಎನ್ನುವರಷ್ಟಲ್ಲಿಯೇ ಬ್ರಿಟನ್ ವೈರಸ್ ಕಾಡಲಾರಂಭಿಸಿದೆ. ಶಿವಮೊಗ್ಗದಲ್ಲಿ ಸೀಲ್‍ಡೌನ್ ಪ್ರವರ ಮತ್ತೆ ಶುರುವಾಗಿದೆ.

ಇದನ್ನೂ ಓದಿ | ಸೋಂಕಿತರ ಟ್ರಾವಲ್ ಹಿಸ್ಟರಿ

ಬ್ರಿಟನ್‍ನಿಂದ ಬಂದಿದ್ದ ಒಂದೇ ಕುಟುಂಬದ ನಾಲ್ವರಲ್ಲಿ ರೂಪಾಂತರ ಕೊರೊನಾ ವೈರಸ್ ಸೋಂಕು ದೃಢಪಡುತ್ತಿದ್ದಂತೆಯೇ ಅವರ ಮನೆಯಿದ್ದ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಮನೆಯನ್ನು ಸ್ಯಾನಿಟೈಸ್ ಮಾಡಲಾಗಿದೆ.
47 ವರ್ಷದ ಪತಿ, 35 ವರ್ಷದ ಪತ್ನಿ ಮತ್ತು 13 ವರ್ಷದ ಯುವತಿ ಹಾಗೂ 4 ವರ್ಷದ ಗಂಡು ಮಗುವಿನಲ್ಲಿ ಸೋಂಕು ದೃಢಪಟ್ಟಿದೆ. ಪ್ರಸಕ್ತ ಅವರನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್‍ನಲ್ಲಿ ದಾಖಲಿಸಲಾಗಿದೆ.

error: Content is protected !!