Fine | ಪೊಲೀಸರ ಮೊಬೈಲ್’ನಲ್ಲಿ ವಿಡಿಯೋ ಪ್ರತ್ಯಕ್ಷ, ಖಾಸಗಿ‌ ಬಸ್ ಚಾಲಕನಿಗೆ ಬಿತ್ತು ದಂಡ

police

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬಸ್ ಚಲಾಯಿಸಿಕೊಂಡೇ ಮೊಬೈಲಿನಲ್ಲಿ‌ ಮಾತನಾಡಿದ ಡ್ರೈವರ್’ಗೆ ಪೊಲೀಸರು ದಂಡ ವಿಧಿಸಿದ್ದಾರೆ.
ಖಾಸಗಿ ಬಸ್ ಡ್ರೈವರ್ ಸಕ್ರೆಬೈಲಿನ ಮನ್ಸೂರ್ ಅಲಿ ಎಂಬುವವರಿಗೆ ₹5 ಸಾವಿರ ದಂಡ ವಿಧಿಸಲಾಗಿದೆ.

READ |  ಶಿವಮೊಗ್ಗದಲ್ಲಿ 197 ಎಂಎಂ ಮಳೆ, ಯಾವ ತಾಲೂಕಿನಲ್ಲಿ ಎಷ್ಟಾಗಿದೆ?

ಪೊಲೀಸರ ಮೊಬೈಲಿಗೆ ಬಂತು ವಿಡಿಯೋ
ಖಾಸಗಿ ಬಸ್ ನ ಚಾಲಕನು ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಾ ಬಸ್ ಚಾಲನೆ ಮಾಡುತ್ತಿರುವ ವಿಡಿಯೋವೊಂದನ್ನು ಸಾರ್ವಜನಿಕರೊಬ್ಬರು ಶಿವಮೊಗ್ಗ ಸಂಚಾರ ಪೊಲೀಸ್ ನವರಿಗೆ ವಾಟ್ಸಾಪ್ ಮುಖಾಂತರ ಕಳುಹಿಸಿ ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದು, ಶಿವಮೊಗ್ಗ ಸಂಚಾರ ವೃತ್ತದ ಸಿಪಿಐ ಸಂತೋಷ್ ಕುಮಾರ್ ವಿಡಿಯೋವನ್ನು ಪರಿಶೀಲಿಸಿ, ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಕಾರಣಕ್ಕೆ ಐಎಂವಿ ಕಾಯ್ದೆಯಡಿಯಲ್ಲಿ ದಂಡ ವಿಧಿಸಲಾಗಿದೆ.

error: Content is protected !!