Gruha Jyothi | ಶಿವಮೊಗ್ಗದಲ್ಲಿ ಗೃಹ ಜ್ಯೋತಿ ಯೋಜನೆ ಅಡಿ ಉಚಿತ ವಿದ್ಯುತ್ ಪಡೆದವರೆಷ್ಟು? ಕೋಟಿ ದಾಟಿದ ಸಬ್ಸಿಡಿ ಮೊತ್ತ!

Gruha jyothi

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯ ಸರ್ಕಾರವು ಗೃಹಜ್ಯೋತಿ ಯೋಜನೆಯಡಿ (Gruha Jyothi scheme) ಪ್ರತಿ ಮನೆಗೆ ಉಚಿತ ವಿದ್ಯುತ್ ಸೌಲಭ್ಯವನ್ನು ನೀಡುತ್ತಿದ್ದು, ಮೆಸ್ಕಾಂ (MESCOM) ಶಿವಮೊಗ್ಗ ವೃತ್ತ ವ್ಯಾಪ್ತಿಯ ಗ್ರಾಹಕರಿಗೆ ಈ ಕೆಳಕಂಡಂತೆ ಸೌಲಭ್ಯವನ್ನು ನೀಡಲಾಗಿದೆ.

READ | ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹಾರಿದ ತ್ರಿವರ್ಣ ಧ್ವಜ, ಸೂಪರ್ ಮಹಿಳೆ ಕಾರ್ಯಕ್ರಮಕ್ಕೆ ಚಾಲನೆ, ಜಿಲ್ಲೆಯಲ್ಲಿ ಏನೇನು ವಿಶೇಷ?

ಆ.1 ರಿಂದ 13ರ ವರೆಗೆ ಒಟ್ಟು ಗೃಹಬಳಕೆ ಗ್ರಾಹಕರ ಸಂಖ್ಯೆ 5,27,014 ಆಗಿರುತ್ತದೆ. ಒಟ್ಟು ನೋಂದಾಯಿಸಿದ ಗ್ರಾಹಕರ ಸಂಖ್ಯೆ 4,04,674, ನೋಂದಾಯಿತ ಗ್ರಾಹಕರ ಸಂಖ್ಯೆ ಶೇ.77, ಗೃಹಜ್ಯೋತಿ ಗ್ರಾಹಕರಿಗೆ ವಿತರಿಸಿದ ಒಟ್ಟು ಬಿಲ್ಲುಗಳು 2,08,785, ಗೃಹಜ್ಯೋತಿ ಗ್ರಾಹಕರಿಗೆ ಶೂನ್ಯ ಬಿಲ್ಲುಗಳನ್ನು ವಿತರಿಸಿರುವುದು 1,64,245 ಗ್ರಾಹಕರಿಗೆ. ಶೂನ್ಯ ಬಿಲ್ ಸಬ್ಸಿಡಿ ಮೊತ್ತ ₹4,37,70,432. ನೆಟ್ ಬಿಲ್ ನೀಡಿರುವ ಗ್ರಾಹಕರ ಸಂಖ್ಯೆ 44,540, ನೆಟ್‍ಬಿಲ್ ಸಬ್ಸಿಡಿ ಮೊತ್ತ ₹ 2,16,57,181, ಒಟ್ಟು ಸಬ್ಸಿಡಿ ಮೊತ್ತ ₹6,54,27,614 ನೀಡಲಾಗಿರುತ್ತದೆ ಎಂದು ಮೆಸ್ಕಾಂ ಅಧೀಕ್ಷಕ ಇಂಜಿನಿಯರ್(ವಿ) ತಿಳಿಸಿದ್ದಾರೆ.

Parade | ಸ್ವಾತಂತ್ರ್ಯ ದಿನಾಚರಣೆ ಪರೇಡ್ ನಲ್ಲಿ ಇದೇ‌ ಮೊದಲು ಕನ್ನಡದಲ್ಲಿ ಆದೇಶ, ಪಥ ಸಂಚಲನದಲ್ಲಿ ಯಾರಿಗೆ ಯಾವ ಸ್ಥಾನ?, ರಂಗೋಲಿ ತುಳಿದ ಚಿತ್ರ ವೈರಲ್

error: Content is protected !!