Suicide attempt | ಫ್ರೀಡಂ ಪಾರ್ಕ್ ನಲ್ಲಿ ಗಾಜಿನಿಂದ ಕೈಕೊಯ್ದುಕೊಂಡು ಬಾಲಕಿ, ಪ್ರಾಣ ರಕ್ಷಿಸಿದ ಪೊಲೀಸ್, ಏನಿದು ಘಟನೆ?

Breaking news

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: 17 ವರ್ಷದ ಬಾಲಕಿಯ ಪ್ರಾಣ ರಕ್ಷಿಸುವ ಮೂಲಕ ಪೊಲೀಸ್ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ‌. ಪೊಲೀಸರ ಈ‌ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Police 2
ಬಾಲಕಿಯ ಪ್ರಾಣ ರಕ್ಷಿಸಿದ ಪೊಲೀಸ್ ಸಿಬ್ಬಂದಿ

READ | ಶಿವಮೊಗ್ಗದಿಂದ ಹೊರಡುವ ವಿಮಾನಗಳ ವೇಳಾಪಟ್ಟಿ, ಮೊದಲು ದಿನದ ಟೈಂ ಟೇಬಲ್ ಏನು?

ಸೋಮವಾರ ಮಧ್ಯಾಹ್ನ ವಿನೋಬನಗರ ಠಾಣೆ ವ್ಯಾಪ್ತಿಯಲ್ಲಿ ERSS ವಾಹನದ ಸಿಬ್ಬಂದಿ ರಾಘವೇಂದ್ರ, ಚಾಲಕ ಚನ್ನಕೇಶವ ಅವರು ERV ವಾಹನದಲ್ಲಿ ಗಸ್ತಿನಲ್ಲಿದ್ದಾಗ ನಗರದ ಫ್ರೀಡಂ ಪಾರ್ಕ್ ನಲ್ಲಿ 17 ವರ್ಷದ ಬಾಲಕಿಯೊಬ್ಬಳು ಗಾಜಿನ ಚೂರಿನಿಂದ ತನ್ನ ಕೈಯನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವುದು ಕಂಡುಬಂದಿದ್ದು, ಕೂಡಲೇ ಆ ಬಾಲಕಿಯನ್ನು ERV ವಾಹನದಲ್ಲಿಯೇ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿ ಬಾಲಕಿಯ ಜೀವ ರಕ್ಷಣೆಯನ್ನು ಮಾಡಿರುತ್ತಾರೆ.
ERSS ಸಿಬ್ಬಂದಿ ಈ ಉತ್ತಮವಾದ ಕಾರ್ಯವನ್ನು ಎಸ್.ಪಿ ಜಿ.ಕೆ.ಮಿಥುನ್ ಕುಮಾರ್ ಪ್ರಶಂಸಿಸಿದ್ದಾರೆ.

error: Content is protected !!