volleyball Tournament | ಶಿವಮೊಗ್ಗದಲ್ಲಿ ನಡೆಯಲಿದೆ ವಾಲಿಬಾಲ್ ಟೂರ್ನಮೆಂಟ್, ಗೆದ್ದವರಿಗೆ ಆಕರ್ಷಕ‌ ಬಹುಮಾನ

Vallyball

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಬಾಲಕರಿಗಾಗಿ ಸೆಪ್ಟೆಂಬರ್ 2 ಮತ್ತು 3ರಂದು ಯುನೈಟೆಡ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರ್ ಕ್ಲಬ್ (United sports and cultural club) ವತಿಯಿಂದ ವಾಲಿಬಾಲ್ ಪಂದ್ಯಾವಳಿ (Valleyball Tournament) ಆಯೋಜಿಸಲಾಗಿದೆ.

Sports news

READ | ಪೊಲೀಸರೊಂದಿಗೆ ಕೆಲಸ ಮಾಡಲು ಸಾರ್ವಜನಿಕರಿಗೂ ಅವಕಾಶ, ಕೂಡಲೇ ಹೆಸರು ನೋಂದಾಯಿಸಿ

ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಧ್ಯಕ್ಷ ಕೆ.ಎಸ್. ಶಶಿ, ಶಿವಮೊಗ್ಗ ವಾಲಿಬಾಲ್ ಸಂಸ್ಥೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ನೆಹರು ಕ್ರೀಡಾಂಗಣದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದರು.

ಕ್ರೀಡಾಪಟುಗಳಿಗೆ ಉಚಿತ ಊಟ ಮತ್ತು ಹೊರಗಿನ ತಂಡಗಳಿಗೆ ವ್ಯವಸ್ಥೆ ಸಹ ಮಾಡಲಾಗಿದ್ದು, ಆಸಕ್ತ ತಂಡಗಳು ಸೆ.2ರಂದು ಮಧ್ಯಾಹ್ನ 12 ಗಂಟೆಗೆ ನೆಹರು ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಬೇಕು.
ಕೆ.ಎಸ್. ಶಶಿ, ಅಧ್ಯಕ್ಷ, ಯುನೈಟೆಡ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರ್ ಕ್ಲಬ್

ಹೊನಲು ಬೆಳಕಿನ ಈ ಪಂದ್ಯಾವಳಿಯನ್ನು ಸೆ.2ರ ಸಂಜೆ 6.30ಕ್ಕೆ ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸುವರು. ಆದಿಚುಂಚನಗಿರಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್ ಅರುಣ್, ಮೇಯರ್ ಶಿವಕುಮಾರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
30 ತಂಡಗಳ ನೋಂದಣಿ, ವಿಜೇತರಿಗೆ ಬಹುಮಾನ
ಈಗಾಗಲೇ ಜಿಲ್ಲೆಯಲ್ಲಿ ಸುಮಾರು 30 ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ನಮ್ಮ ಕ್ಲಬ್‌ನ ವಾಲಿಬಾಲ್ ಕ್ರೀಡಾಪಟು ದಿ. ಸರ್ದಾರ್ ಜಾಫರ್ ಹೆಸರಿನಲ್ಲಿ ವಿಜೇತರಿಗೆ ಟ್ರೋಫಿ ನೀಡಲಾಗುವುದು. ಜೊತೆಗೆ ಕ್ರಮವಾಗಿ ₹7777, ₹5555, ₹33333, ₹2222 ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಸಂಸ್ಥೆಯ ಮತ್ತು ಪಂದ್ಯಾವಳಿಯ ಸಂಚಾಲಕ ಡಾ.ಎಸ್.ಎಚ್. ಪ್ರಸನ್ನ ಮಾತನಾಡಿ, ಈ ಪಂದ್ಯಾವಳಿಯು ತುಂಬ ಆಕರ್ಷಕವಾಗಿರಲಿದೆ. ನಾಲ್ಕು ಬಹುಮಾನಗಳ ಜೊತೆಗೆ ಬೆಸ್ಟ್ ಆಲ್‌ರೌಂಡ್ ಆಟಗಾರ, ಪಾಸರ್, ಹಿಟ್ಟರ್ ಮುಂತಾದ ಹಲವು ವಿಭಾಗಗಳಲ್ಲಿ ವೈಯಕ್ತಿಕ ಪ್ರಶಸ್ತಿಗಳನ್ನು ಕೂಡ ನೀಡಲಾಗುವುದು. ಸಮಾರೋಪ ಸಮಾರಂಭ ಸೆ. 3ರ ಸಂಜೆ 7.30ಕ್ಕೆ ನಡೆಯಲಿದೆ ಎಂದು ಹೇಳಿದರು.
ಕ್ಲಬ್ಬಿನ ಪದಾಧಿಕಾರಿಗಳಾದ ಎಸ್.ವಿಜಯಕುಮಾರ್, ಸಚಿನ್ ಪೂಜಾರಿ, ಸಂದೀಪ್ ಇದ್ದರು.

Gruhalakshmi scheme | ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ? ಸೌಲಭ್ಯಕ್ಕೆ ಯಾರು ಅರ್ಹರು? ಇಲ್ಲಿದೆ ಯೋಜನೆಯ ಪೂರ್ಣ ಮಾಹಿತಿ

error: Content is protected !!