ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬುಧವಾರ ರಾತ್ರಿ ಸುರಿದ ಅಕಾಲಿಕ ಮಳೆಗೆ ಹೊಸಮನೆ ಮತ್ತು ಬಸವನಗುಡಿ ಸೇರಿದಂತೆ ಹಲವೆಡೆ ನೆರೆ ಸೃಷ್ಟಿಯಾಗಿದ್ದು, ಬಡಾವಣೆ ನಿವಾಸಿಗಳು ಇಡೀ ರಾತ್ರಿ ಸೂರಿಲ್ಲದೇ ಕಷ್ಟಪಟ್ಟರು.
ಈಗಾಗಲೇ ಹಲವು ಸಲ ರಾಜಕಾಲುವೆಯನ್ನು ಸರಿಪಡಿಸಿ ಎಂದು ಪಾಲಿಕೆ ಆಯುಕ್ತರು ಮತ್ತು ಮೇಯರ್ ಅವರಿಗೆ ಪಾಲಿಕೆ ಸದಸ್ಯರಿಂದ ಮನವಿ ಮಾಡಲಾಗಿದೆ. ಆದರೆ, ಇದಕ್ಕೆ ಸ್ಪಂದಿಸದಿರುವುದು ಈ ಎಲ್ಲ ಅವಘಡಕ್ಕೆ ಕಾರಣವಾಗಿದೆ.
– ರೇಖಾ ರಂಗನಾಥ್, ಸದಸ್ಯರು, ಮಹಾನಗರ ಪಾಲಿಕೆ ಶಿವಮೊಗ್ಗ
ರಾತ್ರಿ ಬಿದ್ದ ಮಳೆಗೆ ಹೊಸಮನೆ ಬಡಾವಣೆಯ ರಾಜಕಾಲುವೆ ತುಂಬಿ ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿವೆ. ರಸ್ತೆಯ ಮೇಲೆ ನೀರು ನಿಂತು ಓಡಾಡುವುದಕ್ಕೂ ಕಷ್ಟವಾಗಿದೆ. ಮನೆಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ಸಹ ನೀರಿನಲ್ಲಿ ಅರ್ಧ ಮುಳುಗಿವೆ.
ಮಕ್ಕಳು, ವಯೋವೃದ್ಧರು, ಬಾಣಂತಿಯರ ಪಾಡು ಹೇಳತೀರದಾಗಿದೆ. ಗೃಹ ಉಪಯೋಗಿ ವಸ್ತುಗಳನ್ನೆಲ್ಲ ಹಾಳಾಗಿವೆ. ಜನ ಸಂಕಷ್ಟದಲ್ಲಿದ್ದಾರೆ.