Interview | ಶಿವಮೊಗ್ಗದಲ್ಲಿ ಬೋಧಕರ ನೇಮಕಾತಿಗೆ ನಡೆಯಲಿದೆ ಸಂದರ್ಶನ, ಎಲ್ಲಿ, ಯಾವಾಗ?

veternary college shivamogga

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರುಗಳ ಹುದ್ದೆಗಳಿಗೆ ಗುತ್ತಿಗೆ ಆಧಾರಿತವಾಗಿ ನೇಮಕ ಮಾಡಲು ನ.15 ರಂದು ಸಂದರ್ಶನ ನಡೆಸಲಾಗುವುದು.

READ | ಎನ್.ಪಿಸಿಐ ಲಿಂಕ್ ಮಾಡದಿದ್ದರೆ ಬರಲ್ಲ ಪಿಂಚಣಿ, ಲಿಂಕ್ ಮಾಡುವುದು ಹೇಗೆ? ಯಾರನ್ನು ಸಂಪರ್ಕಿಸಬೇಕು?

ಯಾವ್ಯಾವ ಹುದ್ದೆಗಳಿಗೆ ನೇಮಕಾತಿ? ಎಷ್ಟು ವೇತನ?
ಪ್ರಾಣಿ ಆಹಾರಶಾಸ್ತ್ರ ವಿಭಾಗ, ಪಶುವೈದ್ಯಕೀಯ ಔಷಧ ಹಾಗೂ ವಿಷಶಾಸ್ತ್ರ ವಿಭಾಗ, ಜಾನುವಾರು ಉತ್ಪನ್ನಗಳ ತಾಂತ್ರಿಕತೆ ವಿಭಾಗ, ಪಶುವೈದ್ಯಕೀಯ ಸಾರ್ವಜನಿಕ ಆರೋಗ್ಯ ಮತ್ತು ಸಮುದಾಯ ರೋಗ ಅಧ್ಯಯನ ಶಾಸ್ತ್ರ ವಿಭಾಗ, ಪಶುವೈದ್ಯಕೀಯ ಪರೋಪಜೀವಿ ಶಾಸ್ತ್ರ ವಿಭಾಗ, ದೈಹಿಕ ಶಿಕ್ಷಣ ವಿಭಾಗ, ಪಶುವೈದ್ಯಕೀಯ ಶರೀರಕ್ರಿಯಾ ಮತ್ತು ಜೀವರಸಾಯನ ಶಾಸ್ತ್ರ ವಿಭಾಗ, ಪಶುವೈದ್ಯಕೀಯ ಶಸ್ತ್ರ ಚಿಕಿತ್ಸೆ ಮತ್ತು ಕ್ಷ-ಕಿರಣ ಶಾಸ್ತ್ರ ವಿಭಾಗ, ಪಶುವೈದ್ಯಕೀಯ ಚಿಕಿತ್ಸಾ ಸಂಕೀರ್ಣ ಶಾಸ್ತ್ರ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ನಿಯಮಾವಳಿಯಂತೆ ಹಾಗೂ ಮಾರ್ಗಸೂಚಿಯಂತೆ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು. ಆಯ್ಕೆಯಾದ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳಿಗೆ ಮಾಸಿಕ ₹56,700 ಮತ್ತು ರಾಷ್ಟ್ರೀಯ ಅರ್ಹತಾ ಪರೀಕ್ಷೆಯ ಪ್ರಮಾಣ ಪತ್ರ ಹೊಂದಿರದ ಅಭ್ಯರ್ಥಿಗಳಿಗೆ ಮಾಸಿಕ ₹50,000 ವೇತನವಾಗಿ ಪಾವತಿಸಲಾಗುವುದು.
ಸಂದರ್ಶನವನ್ನು ಡೀನ್ ಕಚೇರಿ, ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗದಲ್ಲಿ ಬೆಳಗ್ಗೆ 11 ಗಂಟೆಯಿಂದ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ಜಾಲತಾಣ www.kvafsu.edu.in  ಹಾಗೂ ದೂರವಾಣಿ ಸಂಖ್ಯೆ : 08182-200872 ನ್ನು ಸಂಪರ್ಕಿಸಬಹುದೆಂದು ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!