ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಆಕಾಶವಾಣಿ ಬೆಂಗಳೂರು ನಿಲಯದ ಪ್ರಾದೇಶಿಕ ಸುದ್ದಿ ವಿಭಾಗವು ಶಿವಮೊಗ್ಗ ಜಿಲ್ಲೆಗೆ ಅರೆಕಾಲಿಕ ವರದಿಗಾರರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
READ | ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಯಾರೆಲ್ಲ ಅರ್ಜಿ ಸಲ್ಲಿಸಲು ಅವಕಾಶ?
ಪಿ.ಜಿ. ಡಿಪ್ಲೋಮಾ/ ಪತ್ರಿಕೋದ್ಯಮ/ ಸಮೂಹ ಮಾಧ್ಯಮದಲ್ಲಿ ಪದವಿ ಹೊಂದಿದವರು ಕನಿಷ್ಠ ಎರಡು ವರ್ಷಗಳ ಮಾಧ್ಯಮ ಅನುಭವ ಉಳ್ಳವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ 24 ರಿಂದ 45 ವರ್ಷಗಳಾಗಿದ್ದು, ಆಸಕ್ತಿ ಉಳ್ಳವರು ತಮ್ಮ ಅರ್ಜಿಗಳನ್ನು ದಾಖಲಾತಿಗಳೊಂದಿಗೆ ಅಂಚೆ ವಿಳಾಸ: ಸುದ್ದಿ ವಿಭಾಗದ ಮುಖ್ಯಸ್ಥರು, ಆಕಾಶವಾಣಿ ನಿಲಯ, ರಾಜಭವನ ರಸ್ತೆ, ಬೆಂಗಳೂರು ಇಲ್ಲಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080-22356344 ಮೂಲಕ ಸಂಪರ್ಕಿಸಬಹುದು.