Shimoga airport | ಶಿವಮೊಗ್ಗದಿಂದ ಹೊರಡಬೇಕಿದ್ದ ವಿಮಾನ ಕೊನೆಯ ಕ್ಷಣದಲ್ಲಿ ರದ್ದು, ಸಂಸ್ಥೆಯ ವಿರುದ್ಧವೇ ದೂರು

Star Flight

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗದಿಂದ ತಿರುಪತಿಗೆ ಹೊರಡಬೇಕಿದ್ದ ವಿಮಾನ ಕೊನೆಯ ಕ್ಷಣದಲ್ಲಿ ರದ್ದುಗೊಳಿಸಿದ್ದು, ಇದಕ್ಕೆ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.
ಹೈದ್ರಾಬಾದ್ ನಿಂದ ಶಿವಮೊಗ್ಗಕ್ಕೆ ಶನಿವಾರ ಆಗಮಿಸಿದ್ದ ಸ್ಟಾರ್ ಏರ್ ಸಂಸ್ಥೆಯ ವಿಮಾನವು ಯಾವುದೇ ಮುನ್ಸೂಚನೆ ನೀಡದೇ ಪ್ರಯಾಣ ರದ್ದುಪಡಿಸಿದೆ. ತಿರುಪತಿಗೆ ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರು ಪೇಚಿಗೆ ಸಿಲುಕಿದರು.

READ | ಶಿವಮೊಗ್ಗ ವಿಮಾನ ನಿಲ್ದಾಣ, ಚಳಿಗಾಲದಲ್ಲಿ ಇನ್ನಷ್ಟು ಹೆಚ್ಚಲಿದೆ ಲ್ಯಾಂಡಿಂಗ್ ಸಮಸ್ಯೆ

ಪ್ರಯಾಣ ರದ್ದುಪಡಿಸಲು ಕಾರಣ?
ಶಿವಮೊಗ್ಗದಿಂದ ತಿರುಪತಿಗೆ ಕೇವಲ 13 ಪ್ರಯಾಣಿಕರು ಮಾತ್ರ ಇದ್ದರು. ಹೀಗಾಗಿ, ಪ್ರಯಾಣವನ್ನೇ ರದ್ದುಪಡಿಸಲಾಗಿತ್ತು. ನಾನಾ ಕೆಲಸಗಳು ಹಾಗೂ ವಿವಿಧ ಕಾರಣಗಳಿಂದ ಪ್ರಯಾಣಿಸಬೇಕಿದ್ದವರಿಗೆ ಏಕಾಏಕಿ ಶಾಕ್ ನೀಡಿದ್ದಕ್ಕೆ ಸ್ಟಾರ್ ಏರ್ ಅಧಿಕಾರಿಗಳ ವಿರುದ್ಧ ಪ್ರಯಾಣಿಕರು ಹರಿಹಾಯ್ದರು. ಮಾತಿನ ಚಕಮಕಿಯೂ ನಡೆಯಿತು.
ಸಂಸ್ಥೆಯ ವಿರುದ್ಧ ದೂರು
ಸ್ಟಾರ್ ಏರ್ ವಿರುದ್ಧ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯು ನಾಗರಿಕ ವಿಮಾನಯಾನ ಸೇವೆ ಪ್ರಾಧಿಕಾರ ಮತ್ತು ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ದೂರು ಸಲ್ಲಿಸಿದೆ.

error: Content is protected !!