Lorry Strike | ಜ.17ರಿಂದ ಸರಕು ಸಾಗಣೆ ವಾಹನಗಳ ಸೇವೆ ಸ್ಥಗಿತ, ಕಾರಣವೇನು?

Lorry Truck

 

 

ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಜ.17ರಿಂದ ರಾಜ್ಯದಾದ್ಯಂತ ಸರಕು ಸಾಗಣೆ ವಾಹನಗಳ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಒಂದುವೇಳೆ, ಜ.16ರೊಳಗೆ ಹಿಟ್ ಆಂಡ್ ರನ್ ಕೇಸ್ ಗೆ ಕಠಿಣ ಶಿಕ್ಷೆ ಮತ್ತು ಏಳು ಲಕ್ಷ ರೂ. ದಂಡ ವಿಧಿಸಲು ಭಾರತೀಯ ದಂಡ ಸಂಹಿತೆಯಲ್ಲಿ ಅವಕಾಶ ಮಾಡಿಕೊಟ್ಟಿರುವುದನ್ನು ವಿರೋಧಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಲಾರಿ ಮಾಲೀಕರು ತೀರ್ಮಾನಿಸಿದ್ದಾರೆ.

READ | ಶಿವಮೊಗ್ಗದಿಂದ ಹೊರಡಬೇಕಿದ್ದ ವಿಮಾನ ಕೊನೆಯ ಕ್ಷಣದಲ್ಲಿ ರದ್ದು, ಸಂಸ್ಥೆಯ ವಿರುದ್ಧವೇ ದೂರು

ಲಾರಿ ಮಾಲೀಕರ ಮುಷ್ಕರಕ್ಕೇನು ಕಾರಣ, ಬೇಡಿಕೆಗಳೇನು?

  1. ಹಿಟ್ ಆಂಡ್ ರನ್ ಪ್ರಕರಣ ಸಂಬಂಧ ಜಾರಿಗೆ ತಂದಿರುವ ಕಾಯ್ದೆ ಕುರಿತು ಲಾರಿ ಮಾಲೀಖರೊಂದಿಗೆ ಚರ್ಚೆಸಿಲ್ಲ. ತಕ್ಷಣ ಸರ್ಕಾರ ಈ ಪ್ರಸ್ತಾವನೆಯನ್ನು ವಾಪಸ್ ಪಡೆಯಬೇಕು.
  2. ಹಿಟ್ ಆಂಡ್ ರನ್ ಪ್ರಕರಣದಲ್ಲಿ ಚಾಲಕರು ಪೊಲೀಸ್ ಠಾಣೆ ಅಥವಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಳಿ ಹೋಗದೇ ಪರಾರಿಯಾದರೆ, 10 ವರ್ಷ ಜೈಲು, ಏಳು ಲಕ್ಷ ರೂ. ದಂಡ ವಿಧಿಸುವುದಾಗಿ ನ್ಯಾಯ ಸಂಹಿತೆಯಲ್ಲಿ ಪ್ರಸ್ತಾಪಿಸಲಾಗಿದೆ. ಇದು ಸರಿಯಲ್ಲ.
  3. ಹೊರರಾಜ್ಯಗಳಲ್ಲಿ ಅಪಘಾತ ಸಂಭವಿಸಿದ್ದಲ್ಲಿ ಚಾಲನಾ ಪರವಾನಗಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಜಾಮೀನು ನೀಡಲು ಸ್ಥಳೀಯರ ಭದ್ರತೆ ಕೇಳಬೇಕು. ಇದರಿಂದ ಚಾಲಕರಿಗೆ ತೊಂದರೆ ಆಗುತ್ತಿದೆ.

error: Content is protected !!