ವಿಡಿಯೋ ರಿಪೋರ್ಟ್ | ಕೊರೊನಾ ಮಧ್ಯೆಯೂ ಮುದ ನೀಡಿದ ಡಾಗ್ ಶೋ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸ್ಮಾರ್ಟ್ ಸಿಟಿ ಶಿವಮೊಗ್ಗ ಕೆನಲ್ ಕ್ಲಬ್‍ದಿಂದ ನಗರದ ಎನ್.ಇ.ಎಸ್. ಮೈದಾನದಲ್ಲಿ ಶ್ವಾನ ಮತ್ತು ಬೆಕ್ಕು ಪ್ರದರ್ಶನ ಆಯೋಜಿಸಲಾಗಿತ್ತು.

VIDEO REPORT

40ಕ್ಕೂ ಅಧಿಕ ತಳಿಯ ಶ್ವಾನ ಮತ್ತು ನಾಲ್ಕು ತಳಿಯ ಬೆಕ್ಕುಗಳು ಭಾಗವಹಿಸಿದ್ದವು. ಕೇರಳಾ, ಹೈದರಾಬಾದ್, ತಮಿಳುನಾಡು, ಕರ್ನಾಟಕದಿಂದ ಶ್ವಾನಗಳನ್ನು ಪ್ರದರ್ಶನಕ್ಕೆ ಕರೆದುಕೊಂಡು ಬರಲಾಗಿತ್ತು.
10ಕ್ಕೂ ಅಧಿಕ ಮುಧೋಳ್ ನಾಯಿಗಳು ಭಾಗವಹಿಸಿದ್ದವು. ಒಟ್ಟು 315 ಶ್ವಾನ, 80 ಬೆಕ್ಕು ಪಾಲ್ಗೊಂಡಿದ್ದವು. ಶ್ವಾನ ಪ್ರಿಯರಿಗಾಗಿ ಆಯೋಜಿಸಿದ್ದ ಸೆಲ್ಫಿ ಸ್ಪರ್ಧೆಯಲ್ಲಿ 70ಕ್ಕೂ ಅಧಿಕ ಜನ ಭಾಗವಹಿಸಿದ್ದರು.
ಒಟ್ಟು 75 ಸಾವಿರ ರೂಪಾಯಿ ಮೌಲ್ಯದ ಬಹುಮಾನವನ್ನು ಪ್ರದರ್ಶನದಲ್ಲಿ ಭಾಗವಹಿಸಿದ ಶ್ವಾನಗಳಿಗೆ ನೀಡಲು ನಿಗದಿಪಡಿಸಲಾಗಿತ್ತು.

error: Content is protected !!