Shimoga DC | ಶಿವಮೊಗ್ಗ ನೂತನ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಬಗ್ಗೆ ನಿಮಗೆಷ್ಟು ಗೊತ್ತು?

Gurudatta Hegde 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ನೂತನ ಜಿಲ್ಲಾಧಿಕಾರಿಯಾಗಿ ಗುರುದತ್ತ ಹೆಗಡೆ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಡಾ.ಆರ್.ಸೆಲ್ವಮಣಿ‌ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಧಾರವಾಡದಲ್ಲಿ‌ ಡಿಸಿಯಾಗಿದ್ದ ಗುರುದತ್ತ ಅವರನ್ನು ನೇಮಿಸಲಾಗಿದೆ.

READ |  ನಿಗಮಗಳ ಕುತೂಹಲಕ್ಕೆ ರಾಜ್ಯ ಸರ್ಕಾರ ಬ್ರೇಕ್, ಯಾರಿಗೆ ಯಾವ ನಿಗಮ ಮಂಡಳಿ? ಕಂಪ್ಲೀಟ್ ಡಿಟೇಲ್ಸ್

ನೂತನ ಡಿಸಿ ಬಗ್ಗೆ ತಿಳಿಯಬೇಕಾದ ಅಂಶಗಳಿವು

  • ಜಿಲ್ಲೆಯ ನೂತನ ಡಿಸಿಯಾಗಿ ಗುರುದತ್ತ ಹೆಗಡೆ ಅವರನ್ನು ನೇಮಿಸಲಾಗಿದೆ. ಇವರು 2014ರ ಐಎಎಸ್ ಬ್ಯಾಚ್ ನವರಾಗಿದ್ದಾರೆ.
  • ಧಾರವಾಡದ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗುರುದತ್ತ ಹೆಗಡೆ ಅವರನ್ನು ಶಿವಮೊಗ್ಗಕ್ಕೆ ವರ್ಗಾವಣೆ ಮಾಡಲಾಗಿದೆ‌
  • ಗುರುದತ್ತ ಹೆಗಡೆ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆ ಶಿರಶಿ ತಾಲೂಕು ಹೊನ್ನಗದ್ದೆಯವರಾಗಿದ್ದಾರೆ.
  • ಹೆಗಡೆ ಅವರು ತಮ್ಮ ಪಿಯುಸಿ ಓದಿದ್ದು ಧಾರವಾಡದಲ್ಲಿ. ಅಲ್ಲಿಂದ ಬೆಂಗಳೂರಿನ ಆರ್.ವಿ.ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಪದವಿ ಪಡೆದರು.
  • 2014ರಲ್ಲಿ ಲೋಕಸೇವೆ ಆಯೋಗದ ಪರೀಕ್ಷೆ ಬರೆದು ಉತ್ತೀರ್ಣರಾದರು. ಐಎಎಸ್ ಪರೀಕ್ಷೆಯಲ್ಲಿ‌ ತೇರ್ಗಡೆಯಾದ ಬಳಿಕ‌ ಗುರುದತ್ತ ಹೆಗಡೆ ಅವರು ಬೀದರ್ ಜಿಲ್ಲೆಯಲ್ಲಿ ಪ್ರೋಬೇಷನರಿ ಪೂರೈಸಿದರು. ನಂತರ, ಕೊಪ್ಪಳದಲ್ಲಿ ಉಪ‌ವಿಭಾಗಾಧಿಕಾರಿ, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಸಿಇಓ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿ‌ ಕಾರ್ಯನಿರ್ವಹಿಸಿದರು. ಅದಾದ ಬಳಿಕ ಧಾರವಾಡ ಡಿಸಿಯಾಗಿ‌ ವರ್ಗಾವಣೆಯಾಗಿದ್ದರು.‌ ಈಗ ಶಿವಮೊಗ್ಗ ಡಿಸಿಯಾಗಿ‌ ಅಧಿಕಾರ ಸ್ವೀಕರಿಸಲಿದ್ದಾರೆ.

error: Content is protected !!