ನೀರು ಪೋಲು ತಡೆಗೆ ಡ್ರಿಪ್ ವ್ಯವಸ್ಥೆ, ಮುಖ್ಯಮಂತ್ರಿಗೆ 400 ಕೋಟಿ ರೂ. ಪ್ರಸ್ತಾವನೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಾಲೆಗಳಲ್ಲಿ ನೀರು ಪೋಲಾಗದಂತೆ ಡ್ರಿಪ್ ಮೂಲಕ ನೀರು ಹರಿಸಲು ಯೋಜನೆ ರೂಪಿಸಲಾಗಿದೆ ಎಂದು ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಹೇಳಿದರು.

ಇದನ್ನೂ ಓದಿ । ಲಕ್ಷಾಂತರ ಜನರಿಗೆ ಪಿಡುಗಾಗಿ ಕಾಡುತ್ತಿರುವ ಹಕ್ಕಿ ಜ್ವರ ಕಂಪ್ಲೀಟ್ ರಿಪೋರ್ಟ್

ಪತ್ರಿಕಾ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಗೋಂದಿ ನಾಲೆಯನ್ನು ಪ್ರವಾಸೋದ್ಯಮ ತಾಣವಾಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.
400 ಕೋಟಿ ರೂ. ಪ್ರಸ್ತಾವನೆ: ಕಾಡಾ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗಾಗಿ 400 ಕೋಟಿ ರೂಪಾಯಿ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಕಾಡಾದಿಂದ ಸಿಗುವ ಸಕಲ ಸೌಲಭ್ಯ ರೈತರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ರೈತರಿಗೆ ಸೌಲಭ್ಯ ನೀಡುವುದಕ್ಕಾಗಿಯೇ ಕಾಡಾ ಇರುವುದು. ಭದ್ರಾ ನಾಲೆ ಆಧುನೀಕರಣ ಕೂಡ ಸಮರ್ಪಕವಾಗಿಲ್ಲ. ಈ ಕಾರಣಕ್ಕಾಗಿಯೂ ರೈತರಿಗೆ ಅನಾನುಕೂಲ ಆಗುತ್ತಿದೆ.
– ಪವಿತ್ರ ರಾಮಯ್ಯ, ಅಧ್ಯಕ್ಷರು, ಭದ್ರಾ ಕಾಡಾ

ಆಗಬೇಕಿದೆ ಮೇಜರ್ ಸರ್ಜರಿ: ಶೇಕಡ 80ರಷ್ಟು ನೀರು ತೋಟಗಾರಿಕೆ ಬೆಳೆಗಳಿಗೆ ಬಳಸಲಾಗುತ್ತಿದೆ. ಭತ್ತ ಬೆಳೆಯುವ ರೈತರು ಕಷ್ಟದಲ್ಲಿದ್ದಾರೆ. ಆದ್ದರಿಂದ, ಆಹಾರ ಪೂರೈಸುವ ಬೆಳೆಗಳಿಗೆ ನೀರು ಹರಿಸುವ ನಿಟ್ಟಿನಲ್ಲಿ ಯೋಚಿಸುವ ಅಗತ್ಯತೆ ಇದೆ. ಈ ಬಗ್ಗೆ ಸರ್ಕಾರದ ಗಮನವನ್ನೂ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂ ಓದಿ । 19ರಂದು ಉದ್ಯೋಗ ಮೇಳ, ಯಾರೆಲ್ಲ ಭಾಗವಹಿಸಬಹುದು?

40 ಕೋಟಿ ಅರ್ಜಿ ಸಲ್ಲಿಕೆ: ನಾನಾ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಕ್ಕಾಗಿ 40 ಕೋಟಿ ಕೆಲಸಕ್ಕಾಗಿ ರೈತರಿಂದ ಅರ್ಜಿ ಬಂದಿವೆ. ಆದರೆ, ಕೊರೊನಾದಿಂದ ಆರ್ಥಿಕ ಸಮಸ್ಯೆ ಇದೆ. ಹೀಗಾಗಿ, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಸ್ಪಂದನೆ ನೀಡಿ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಕೆಲಸಕ್ಕೆ 15ರಿಂದ 20 ಲಕ್ಷ ರೂಪಾಯಿ ಮಂಜೂರು ಮಾಡಲಾಗಿದೆ ಎಂದು ಹೇಳಿದರು.

ಪ್ರ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ನಾಗರಾಜ್ ನೇರಿಗೆ ಇದ್ದರು.

error: Content is protected !!