ದೇವರ ಆಭರಣವನ್ನೂ ಬಿಡದ ಖದೀಮರು!

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಮಲವಗೊಪ್ಪದಲ್ಲಿರುವ ಅಂತರಘಟ್ಟಮ್ಮ ದೇವಸ್ಥಾನದಲ್ಲಿ ಕಳ್ಳರು ತನ ಕೈಚಳಕ ತೋರಿದ್ದಾರೆ.
150 ಗ್ರಾಂ ಬೆಳ್ಳಿ ಮತ್ತು ಮೂರು ಗ್ರಾಂ ಚಿನ್ನದ ಆಭರಣ ಸೇರಿ ಒಟ್ಟು ಅಂದಾಜು 25 ಸಾವಿರ ರೂಪಾಯಿ ಮೌಲ್ಯದ ಆಭರಣಗಳನ್ನು ಕಳವು ಮಾಡಿದ್ದಾರೆ.

ಇದನ್ನೂ ಓದಿ । 19ರಂದು ಉದ್ಯೋಗ ಮೇಳ, ಯಾರೆಲ್ಲ ಭಾಗವಹಿಸಬಹುದು?

ಘಟನೆಗೆ ಏನು ಕಾರಣ: ದೇವಸ್ಥಾನದ ಬಾಗಿಲು ಹಾಳಾಗಿದ್ದು, ಅದನ್ನು ಸರಿಪಡಿಸುವಂತೆ ಪೊಲೀಸರು ಸಹ ಈ ಹಿಂದೆ ತಿಳಿಸಿದ್ದರು. ಆದರೆ, ಅದನ್ನು ರಿಪೇರಿ ಮಾಡಿರಲಿಲ್ಲ. ಕಳ್ಳರು ಇದರ ಲಾಭ ಪಡೆದು ದೇವಸ್ಥಾನದ ಒಳಗಿದ್ದ ದೇವರ ಆಭರಣಗಳನ್ನೇ ಕಳವು ಮಾಡಿ ಪರಾರಿಯಾಗಿದ್ದಾರೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

error: Content is protected !!