ಶುಂಠಿ ಬೆಲೆ ಇಳಿಕೆ, ಆತ್ಮಹತ್ಯೆಗೆ ಶರಣಾದ ರೈತ

 

 

ಸುದ್ದಿ ಕಣಜ.ಕಾಂ
ಶಿಕಾರಿಪುರ: ಶುಂಠಿಯ ಬೆಲೆ ಇಳಿಕೆಯಾಗಿದ್ದು, ಹಾಕಿದ್ದ ಬಂಡವಾಳವೂ ವಾಪಸ್ ಬಾರದೇ ರೈತ ಮನೆಯಲ್ಲಿ ಅತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಾಲೂಕಿನ ಮಟ್ಟಿಕೋಟೆ ಗ್ರಾಮದ ನಿವಾಸಿ ಅಶೋಕಪ್ಪ (41) ಎಂಬಾತನೇ ಆತ್ಮಹತ್ಯೆಗೆ ಶರಣಾದ ರೈತ.

ಈತ ಹಲವೆಡೆ ಸಾಲ ಕೂಡ ಮಾಡಿದ್ದ ಎಂದು ತಿಳಿದುಬಂದಿದೆ. ಅರ್ಬನ್ ಬ್ಯಾಂಕ್‌ ನಲ್ಲಿ ಎಂಟು ಲಕ್ಷ ರೂಪಾಯಿ, ಶಿವ ಸಹಕಾರಿ ಬ್ಯಾಂಕ್‌ ನಲ್ಲಿ ಎರಡು ಲಕ್ಷ ರೂಪಾಯಿ ಸೇರಿ ಹನ್ನೆರಡು ಲಕ್ಷ ರೂ. ಸಾಲ ಮಾಡಿದ್ದ ಎನ್ನಲಾಗಿದೆ.

ಸಾಲಕ್ಕೆ ಬಡ್ಡಿ ಕೂಡ ಕಟ್ಟಲು ಸಾಧ್ಯವಾಗದೇ ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!