ಶಿವಮೊಗ್ಗದ 9 ಕೇಂದ್ರಗಳಲ್ಲಿ ಶುರುವಾಯ್ತು ಕೊರೊನಾ ಲಸಿಕೆ ನೀಡುವ ಕಾರ್ಯ

 

 

ಸುದ್ದಿ ಕಣಜ.ಕಾಂ
ಶಿವಮೊಗ: ಜಿಲ್ಲೆಯಲ್ಲಿ ಕೊರೊನಾ ಲಸಿಕೆ ನೀಡುವ ಕಾರ್ಯ ಆರಂಭಗೊಂಡಿದೆ. ಚಿತ್ರದುರ್ಗ ರವಾನೆ ಮಾಡಿರುವ ಲಸಿಕೆಗಳು ಶುಕ್ರವಾರ ಮಧ್ಯಾಹ್ನ ಶಿವಮೊಗ್ಗಕ್ಕೆ ತಲುಪಿದೆ. ಅವುಗಳನ್ನು ಜಿಲ್ಲೆಯ ನಾಲ್ಕು ಕಡೆಗಳಲ್ಲಿ ದಾಸ್ತಾನು ಮಾಡಲಾಗಿದೆ.
ಲಸಿಕೆ ನೀಡುವ ಮೊದಲನೇ ದಿನವಾದ ಶನಿವಾರ ಶಿವಮೊಗ್ಗ ನಗರದಲ್ಲಿರುವ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ ಹಾಗೂ ತುಂಗಾನಗರ ಪ್ರಸೂತಿ ಕೇಂದ್ರದಲ್ಲಿ ಆರೋಗ್ಯ ಲಸಿಕೆ ನೀಡಲಾಯಿತು.

ಇದನ್ನೂ ಓದಿ | ಶಿವಮೊಗ್ಗಕ್ಕೆ ಬರಲಿದೆ ಕೋವಿಡ್ ಲಸಿಕೆ, ಎಲ್ಲೆಲ್ಲಿ ಸ್ಟೋರೇಜ್ ಕಂಪ್ಲೀಟ್ 

ಮೊದಲ ಹಂತದ ಮೊದಲ ದಿನದಂದು ಜಿಲ್ಲೆಯಲ್ಲಿ ಗುರುತಿಸಲಾಗಿರುವ ಕೇಂದ್ರಗಳಲ್ಲಿ ಲಸಿಕೆ ನೀಡಲಾಯಿತು. ಪ್ರತಿ ಕೇಂದ್ರಗಳಲ್ಲಿ ನೂರು ಜನರಿಗೆ ಲಸಿಕೆ ನೀಡಲು ಉದ್ದೇಶಿಸಲಾಗಿದೆ. ಅದರಂತೆ ಬೆಳಗ್ಗೆಯಿಂದಲೇ ಈ ಕಾರ್ಯ ಸುಸೂತ್ರವಾಗಿ ಸಾಗುತ್ತಿದೆ.

error: Content is protected !!