ಹುಣಸೋಡು ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಎಷ್ಟು ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗುರುವಾರ ರಾತ್ರಿ ಮಲೆನಾಡನ್ನೇ ನಡುಗಿಸಿದ್ದ ಭೀಕರ ಸ್ಫೋಟಕ್ಕೆ ಐದು ಜನ ಬಲಿಯಾಗಿದ್ದು, ಅವರೆಲ್ಲರ ಶವಗಳನ್ನು ಸಂಗ್ರಹಿಸಿ ಮರಣೋತ್ತರ ಪರೀಕ್ಷಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಗುರುವಾರ ರಾತ್ರಿಯೇ ಪೊಲೀಸರು ಸ್ಫೋಟವಾದ ಕ್ರಷರ್ ಜಾಗಕ್ಕೆ ಹೋಗಿದ್ದರು. ಆದರೆ, ಕತ್ತಲಿನಿಂದ ಶವಗಳನ್ನು ಅಲ್ಲಿಯೇ ಇಡಲಾಗಿತ್ತು. ಬೆಳಗ್ಗೆ ಬಂದು ಶೋಧ ಕಾರ್ಯ ನಡೆಸಿ ಶವಗಳನ್ನು ಸಾಗಿಸಲಾಗಿದೆ.
5 ಲಕ್ಷ ರೂಪಾಯಿ ಪರಿಹಾರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಇನ್ನುಳಿದಂತೆ ಕಾರ್ಮಿಕ ಇಲಾಖೆ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಮೃತರ ಕುಟುಂಬಗಳಿಗೆ ಹೆಚ್ಚುವರಿ ಪರಿಹಾರ ಹಾಗೂ ಸಹಾಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

error: Content is protected !!