ಹುಣಸೋಡು ಸ್ಫೋಟ | ಡಿಸಿ, ಎಸ್.ಪಿ ಸೇರಿ 7 ಜನರ ವಿರುದ್ಧ ಲೋಕಾಯುಕ್ತಕ್ಕೆ ದೂರು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹುಣಸೂಡು ಕಲ್ಲು ಕ್ರಷರ್ ಸ್ಫೋಟಗೊಂಡ ಬೆನ್ನಲ್ಲೇ ಪ್ರಕರಣ ಭಾರಿ ತೀವ್ರತೆ ಪಡೆದಿದೆ. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಎಸ್.ಪಿ. ಕೆ.ಎಂ.ಶಾಂತರಾಜು ಸೇರಿ ಏಳು ಜನರ ಮೇಲೆ ಲೋಕಾಯುಕ್ತದಲ್ಲಿ ದೂರು ನೀಡಲಾಗಿದೆ.
ಕಲ್ಲಗಂಗೂರು ನಿವಾಸಿ ಸಂದೀಪ್ ಎಂಬುವವರು ದೂರು ಸಲ್ಲಿಸಿದ್ದಾರೆ. 2013ರಲ್ಲಿಯೇ ಸಂದೀಪ್ ಅವರು ನಿಯಮ ಬಾಹಿರವಾಗಿ ಕಲ್ಲು ಕ್ರಷರ್, ಕ್ವಾರೆಗಳ ವಿರುದ್ಧ ದೂರು ನೀಡಿದ್ದರು. ಈ ಸಂಬಂಧ ಜನವರಿ 29ರಂದು ವಿಚಾರಣೆ ದಿನಾಂಕ ನಿಗದಿಯಾಗಿತ್ತು.
ಅಧಿಕಾರಿಗಳು: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಎಸ್.ಪಿ ಕೆ.ಎಂ.ಶಾಂತರಾಜು, ತಹಸೀಲ್ದಾರ್ ನಾಗರಾಜ್, ಪಿಸಿಬಿ ಅಧಿಕಾರಿ ಹರಿಶಂಕರ್, ಹಿರಿಯ ಭೂವಿಜ್ಞಾನಿ ರಾಂಜಿ ನಾಯ್ಕ, ಭೂ ವಿಜ್ಞಾನಿ ಜ್ಯೋತಿ, ಉಪ ಪರಿಸರ ಅಧಿಕಾರಿ ಶಿಲ್ಪಾ  ಇವರು ವಿರುದ್ಧ ಲೋಕಾಯುಕ್ತದಲ್ಲಿ ದೂರು ಸಲ್ಲಿಸಲಾಗಿದೆ.

error: Content is protected !!